ಡಿವಿಜಿ ಸುದ್ದಿ, ದಾವಣಗೆರೆ: ಕಂಟೈನ್ ಮೆಂಟ್ ಏರಿಯಾ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದ ಹೆಡ್ ಕಾನ್ಸ್‍ಟೇಬಲ್ ಸೇರಿದಂತೆ ಗುಣಮುಖರಾದ 15 ಜನರನ್ನು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
ಜಿಲ್ಲೆಯಲ್ಲಿ ಇಂದು 11 ಹೊಸ ಪ್ರಕರಣ ಸೇರಿದಂತೆ ಒಟ್ಟು 136 ಕೊರೊನಾ ಪಾಸಿಟಿವ್ ಪತ್ತೆಯಾದಂತಾಗಿದ್ದು, ಅದರಲ್ಲಿ 4 ಜನ ಮೃತಪಟ್ಟಿದ್ದು, 65 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಇನ್ನು 57 ಪ್ರಕರಣಗಳು ಸಕ್ರಿಯವಾಗಿವೆ.
ಈ ಸಂದರ್ಭದಲ್ಲಿ ಐಜಿಪಿ ರವಿ.ಎಸ್, ಎಸ್‍ಪಿ ಹನುಮಂತರಾಯ, ಎಎಸ್‍ಪಿ ರಾಜೀವ್, ಎಡಿಸಿ ಪೂಜಾರ್ ಹಾಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



