ಡಿವಿಜಿ ಸುದ್ದಿ, ದಾವಣಗೆರೆ: ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿಜಿಗಳು ಸಮಾಜ ಸೇವಕ, ಸ್ಪೂರ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ಸತ್ಯನಾರಾಯಣ ರೆಡ್ಡಿ ಅವರನ್ನು ಸನ್ಮಾನಿಸಿದರು.
ಸನ್ಮಾನದ ನಂತರ ಮಾತನಾಡಿದ ಸ್ವಾಮಿಜಿಗಳು ಮಾತನಾಡಿದ ಶ್ರೀಗಳು, ಕೊರೊನಾ ವೈರಸ್ ಸಾಂಕ್ರಾಮಿಕ ಕಾಯಿಲೆಯಿಂದ ಪ್ರಂಪಚದಾದ್ಯಂತ ಲಾಕ್ ಡೌನ್ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಅನೇಕ ಜನರು ತೊಂದರೆಗೀಡಾಗಿದ್ದು ಬಡವರಿಗೆ, ಪೌರ ಕಾರ್ಮಿಕರಿಗೆ, ನಿರಾಶ್ರಿತರಿಗೆ 45 ದಿನಗಳ ಕಾಲ ಪ್ರತಿದಿನ ಅನ್ನದಾಸೋಹ ಮಾಡಿದ ಸ್ಪೂರ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ಸತ್ಯನಾರಾಯಣ ರೆಡ್ಡಿ ಅವರನ್ನು ಶ್ಲಾಘಿಸಿದರು. ಇವರು ನಿಜವಾದ ಪಬ್ಲಿಕ್ ಹೀರೋ ಎಂದು ಬಣ್ಣಿಸಿದರು. ರೆಡ್ಡಿ ಅವರ ಕಾರ್ಯಕ್ಷಮತೆ ಇಂದಿನ ಯುವಕರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಈ ಸಂಸ್ಥೆಗೆ ಹಣದ ಹಾಗೂ ಇತರೆ ಸಹಾಯ ಮಾಡಿದ ದಾವಣಗೆರೆಯ ಎಲ್ಲಾ ದಾನಿಗಳಿಗೂ ಅಭಿನಂದಿಸಿದರು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸಂದೀಪ್ ನರ್ಸಿಂಗ್ ಹೋಂ ಮಾಲೀಕ ಡಾ|| ಮಲ್ಲಿಕಾರ್ಜುನ್ ಹಾಗೂ ಕೃಷಿ ಸಮಾಜ ಜಿಲ್ಲಾಧ್ಯಕ್ಷ ಹೆಚ್ ಆರ್ ಲಿಂಗರಾಜು ಅವರನ್ನು ಸನ್ಮಾನಿಸಿದರು. ನಮ್ಮ ಪೀಠ ಇಂತಹ ಸಾಮಾಜಮುಖಿ ಕೆಲಸ ಕಾರ್ಯಗಳಿಗೆ ಸದಾ ಜೊತೆಯಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ. ವೇದಮೂರ್ತಿ, ಅಂಗಡಿ ನಾಗಪ್ಪ , ತಾಳೇರ ರಾಜಣ್ಣ, ಸೇವಾಹಿ ವೆಲ್‌ಫೇರ್ ಆಸೋಸಿಯೆಷನ್ ಸಂಸ್ಥಾಪಕ ಜಿ. ಮಹಾಂತೇಶ, ನಿರ್ದೇಶಕರುಗಳಾದ ಮಾದೇಗೌಡ ಎಮ್ ಆವಟೆ, ಅನಿಲ್ ರಾಯ್ಕರ್, ಪರಶುರಾಮ್, ನಿರಂಜನ್ ಅಣಬೂರ್‌ಮಠ್, ನಾಗರಾಜ್ ಕೆ. ಜೆ, ಶೀಕಾಂತ್ ಬಗರೆ ಮತ್ತಿತರರು ಉಪಸ್ಥಿತರಿದ್ದರು.



