ಡಿವಿಜಿ ಸುದ್ದಿ, ದಾವಣಗೆರೆ: ನಾಳೆ ಇಡೀ ದೇಶದಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿ ಇದರಲಿದೆ. ಕೇಂದ್ರ ಸರ್ಕಾರ ಮಾರ್ಗ ಸೂಚಿಯಂತೆ ದಾವಣಗೆರೆ ಜಿಲ್ಲೆಯಲ್ಲಿಯೂ ಸಂಪೂರ್ಣ ಲಾಕ್ ಡೌನ್ ಇರಲಿದೆ.
ಲಾಕ್ ಡೌನ್ ಸಡಿಲಿಸಿದ ರಾಜ್ಯ ಸರ್ಕಾರ ಪ್ರತಿದಿನ ರಾತ್ರಿ 7 ರಿಂದ ಬೆಳಿಗ್ಗೆ 7 ರವರೆಗೆ ಎಲ್ಲಾ ನಿಷೇಧಾಜ್ಞೆ ಹೇರಿತ್ತು. ಜೊತೆಗೆ ಭಾನುವಾರ ಸಂಪೂರ್ಣ ಕಾಲ್ ಡೌನ್ ಹಿನ್ನೆಲೆ ನಾಳೆ ಬೆಳಿಗ್ಗೆ 7 ರಿಂದ ಸಂಜೆ ರವರೆಗೆ ಸಹ ಎಲ್ಲಾ ಆರ್ಥಿಕ ಚಟುವಟಿಕೆ, ಸಂಚಾರನ್ನು ನಿಷೇಧಿಸಿದೆ. ಸಿಆರ್‍ಪಿಸಿ ಸೆಕ್ಷನ್ 144 ರಡಿಯಲ್ಲಿ ನಿಷೇಧಾತ್ಮಕ ಆದೇಶ (ಕರ್ಫ್ಯೂ )ವನ್ನು ಹೊರಡಿಸಲಾಗಿದೆ.
ಮದುವೆ ಸಮಾರಂಭಕ್ಕೆ ಅವಕಾಶ: ಈಗಾಗಲೇ ನಿಗದಿಪಡಿಸಿರುವಂತಹ ಮದುವೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಂಡು ಗರಿಷ್ಟ 50 ಕ್ಕೆ ಸೀಮಿತಗೊಳಿಸಲಾಗಿದೆ. ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸರಳವಾಗಿ ಮದುವೆ ಸಮಾರಂಭವನ್ನು ನಡೆಸಲು ಅನುಮತಿಸಲಾಗಿದೆ.
ಏನು ಇರುತ್ತೆ…?
ಇದಲ್ಲದೇ ಭಾನುವಾರದಂದು ಅವಶ್ಯ ಚಟುವಟಿಕೆಗಳಾದ ಮೆಡಿಕಲ್ ಶಾಪ್, ತರಕಾರಿ ಅಂಗಡಿ(ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆ ಅಂಗಡಿಗಳನ್ನು ಹೊರತುಪಡಿಸಿ) ಹಾಲಿನ ಕೇಂದ್ರ, ಕಿರಾಣಿ ಅಂಗಡಿ, ಪೆಟ್ರೋಲ್ ಬಂಕ್, ಮಟನ್/ಚಿಕನ್ ಅಂಗಡಿಗಳಿಗೆ ಅವಕಾಶವಿದೆ.



