ಡಿವಿಜಿ ಸುದ್ದಿ, ಬೆಂಗಳೂರು: ಮಹಾರಾಷ್ಟದ ಕೊರೊನಾ ಸೋಂಕಿನ ಮಹಾ ಸ್ಟೋಟಕ್ಕೆ ರಾಜ್ಯ ತತ್ತರಿಸಿ ಹೋಗಿದೆ. ಲಾಕ್ ಡೌನ್ ಸಡಿಲ ನಂತರ ರಾಜ್ಯದಲ್ಲಿ ಕೊರೊನಾ ಕೇಕೆ ಜೋರಾಗಿದೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ ಹೊರತು. ನಿಯಂತ್ರಣಕ್ಕೆ ಸಿಗುತ್ತಿಲ್ಲ. ಒಂದೆಡೆ ಆರ್ಥಿಕ ಹೊಡೆತ, ಇನ್ನೊಂದೆಡೆ ಕೊರೊನಾ ಹೊಡೆತಕ್ಕೆ ರಾಜ್ಯ ಬೆಚ್ಚಿ ಬಿದ್ದಿದೆ. ಇಂದು ಕೂಡ ಮಹಾಮಾರಿ ಸ್ಟೋಟಿಸಿದ್ದು, ಬರೋಬ್ಬರಿ 196 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಂಡ್ಯ 28, ರಾಯಚೂರು 39, ಗದಗ್ 15, ಚಿಕ್ಕಬಳ್ಳಾಪುರ 20, ಬೆಂಗಳೂರು 4, ಯಾದಗಿರಿ ಬರೋಬ್ಬರಿ 72, ದಕ್ಷಿಣ ಕನ್ನಡ 3, ಹಾಸನ 4, ಕಲಬುರಗಿ, ಬೆಳಗಾವಿ ಹಾಗೂ ಉಡುಪಿ, ಧಾರವಾಡ ತಲಾ 1, ಕೋಲಾರ 2, ದಾವಣಗೆರೆ 3, ಉತ್ತರ ಕನ್ನಡ 2 ಪ್ರಕರಣಗಳು ವರದಿಯಾಗಿದೆ.
196 ಕೇಸ್ ನಲ್ಲಿ 172 ಮುಂಬೈ ಲಿಂಕ್ ಇದೆ. ಬೆಂಗಳೂರಿನ ನಾಲ್ವರಲ್ಲಿ ಮಹಾರಾಷ್ಟ್ರದಿಂದ ಬಂದಂತಹ 17 ವರ್ಷದ ಹುಡುಗನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸಿಲಿಕಾನ್ ಗೂ ಮಹಾರಾಷ್ಟ್ರ ಲಿಂಕ್ ಆರಂಭವಾಗಿದೆ. ಮೇ 19ರಿಂದ ಕರ್ನಾಟಕದಲ್ಲಿ ಸೆಂಚುರಿ ಸ್ಫೋಟವಾಗಿತ್ತು. ಈಗ ಕೇವಲ 4 ದಿನದಲ್ಲಿ ಒಟ್ಟು 560 ಪ್ರಕರಣಗಳು ಪತ್ತೆಯಾಗಿವೆ.



