ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್-19 ಲಾಕ್ಡೌನ್ ಪ್ರಭಾವ ತಗ್ಗಿಸುವ ಹಿನ್ನೆಲೆ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಮತ್ತು ಇತರೆ ಕೈಗಾರಿಕಾ (ಹೆಚ್ಟಿ ಮತ್ತು ಎಲ್.ಟಿ) ಗ್ರಾಹಕರಿಗೆ (ಮೈಕ್ರೋ ಸ್ಮಾಲ್ ಅಂಡ್ ಮೀಡೀಯಂ ಎಂಟರ್ ಪ್ರೈಸಸ್ (ಎಂಎಸ್ಎಂಇ) ಅಂಡ್ ನಾನ್ ಎಂಎಸ್ಎಂಇ) ಕೆಲವು ಪರಿಹಾರ ಮತ್ತು ರಿಯಾಯಿತಿಗಳನ್ನು ನೀಡಿದೆ.
ನಿಗದಿತ ಸಮಯದಲ್ಲಿ ಸರಿಯಾದ ವಿಧಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆದೇಶಿಸಿದ್ದು, ಎಂಎಸ್ಎಂಇ ಕೈಗಾರಿಕಾ ಗ್ರಾಹಕರು ಸಕ್ಷಮ ಪ್ರಾಧಿಕಾರ ನೀಡಿರುವ ಎಂಎಸ್ಎಂಇ ಪ್ರಮಾಣ ಪತ್ರದ ದೃಢೀಕೃತ ಪ್ರತಿಯನ್ನು ಮೇ 30 ರೊಳಗಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಗ್ರಾಮೀಣ ಉಪವಿಭಾಗ, ಬೆವಿಕಂ, ದಾವಣಗೆರೆ ಕಛೇರಿಗೆ ಸಲ್ಲಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್. ಜಿ. ಎಂ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



