ಡಿವಿಜಿ ಸುದ್ದಿ, ಬೆಂಗಳೂರು: ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಇದ್ದರೂ ಮದುವೆ ಸಮಾರಂಭಗಳಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.
ಮದುವೆ ಸಮಾರಂಭ ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಮತಿ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮದುವೆಯಲ್ಲಿ ಗರಿಷ್ಠ ಅತಿಥಿಗಳ ಸಂಖ್ಯೆ 50 ಇರಬೇಕು ಷರತ್ತು ವಿಧಿಸಲಾಗಿದೆ.ಸಾಮಾಜಿಕ ಅಂತರ ಕಾಯ್ದುಕೊಂಡು ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ ಸರಳ ವಿವಾಹ ನಡೆಸಬಹುದು.
ಭಾನುವಾರ ಅತ್ಯವಶ್ಯಕ ಚಟುವಟಿಕೆಗಳಿ ಹೊರತುಪಡಿಸಿ ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಸಂಪೂರ್ಣ ಲಾಕ್‌ಡೌನ್ ಇರುತ್ತದೆ. ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. 14ರ ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಇರುತ್ತದೆ ಎಂದು ತಿಳಿಸಿದಿದೆ.



