ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಇಂದು ಮತ್ತೆ 3 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 115ಕ್ಕೆ ಏರಿಕೆಯಗಿದೆ. 5 ಮಂದಿ ಗುಣಮುಖರಾಗಿ ಡಿಚ್ಚಾರ್ಜ್ ಆಗಿದ್ದಾರೆ.
ಈ ಬಗ್ಗೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, 15 ವರ್ಷದ ಯುವಕ ಪಿ-1483 ಕಂಟೈನ್ ಮೆಂಟ್ ಝೋನ್ ಸಂಪರ್ಕದಿಂದ ಬಂದಿದೆ. 68 ವರ್ಷದ ಮಹಿಳೆ ಪಿ-1485 ರೋಗಿ ಸಂಖ್ಯೆ ಪಿ-667 ಸಂಪರ್ಕ ಹೊಂದಿದ್ದಾರೆ. ಇನ್ನು 06 ವರ್ಷದ ಮಗು ಪಿ-1488 ರೋಗಿ ಸಂಖ್ಯೆ ಪಿ-634 ಸಂಪರ್ಕ ಹೊಂದಿದ್ದಾರೆ ತಿಳಿದು ಬಂದಿದೆ.
ನಿನ್ನೆ 07 ಜನ ಕೊರೊನಾ ದಿಂದ ಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದು, ಇಂದು ಮತ್ತೆ 5 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.
ಪಿ-618, ಪಿ-620, ಪಿ-623, ಪಿ-628 ಹಾಗೂ ಪಿ-664 ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 115 ಕೊರೊನಾ ಪಾಸಿಟ್ ಕೇಸ್ ಗಳಲ್ಲಿ 14 ಜನ ಗುಣಮುಖರಾಗಿ ಆಸ್ಪತ್ರೆ ಡಿಚ್ಚಾರ್ಜ್ ಆಗಿದ್ದು, 4 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ 97 ಸಕ್ರಿಯ ಪ್ರಕಣಗಳು ಇದ್ದಂತಾಗಿದೆ.
Mid day Bulletin 21/05/2020.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept pic.twitter.com/K5tQRIkkog
— Karnataka Health Department (@DHFWKA) May 21, 2020



