Connect with us

Dvgsuddi Kannada | online news portal | Kannada news online

ದಾವಣಗೆರೆ: ಮೂವರು ಕೊರೊನಾದಿಂದ ಗುಣಮುಖ, ಇಂದು 22 ಪಾಸಿಟಿವ್ ಪತ್ತೆ, ಇನ್ನು 1,430 ವರದಿ ಬಾಕಿ

ಪ್ರಮುಖ ಸುದ್ದಿ

ದಾವಣಗೆರೆ: ಮೂವರು ಕೊರೊನಾದಿಂದ ಗುಣಮುಖ, ಇಂದು 22 ಪಾಸಿಟಿವ್ ಪತ್ತೆ, ಇನ್ನು 1,430 ವರದಿ ಬಾಕಿ

ಡಿವಿಜಿ ಸುದ್ದಿ, ದಾವಣಗೆರೆ:  ದಾವಣಗೆರೆಯಲ್ಲಿ ಇಂದು 22 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಮೂರು ಕೊರೊನಾ ಪಾಸಿಟಿವ್ ರೋಗಿಗಳು ಗುಣಮುಖರಾಗಿದ್ದಾರೆ. ಬಿಡುಗಡೆಗೆ ಸಿದ್ಧತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಇಂದು ಜಿಲ್ಲಾಡಳಿತ ಕಚೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೆಲ ಪ್ರಕರಣಗಳನ್ನು ಹೊರತುಪಡಿಸಿದರೆ ಇನ್ನುಳಿದವೆಲ್ಲ ಹಳೇ ರೋಗಿಗಳ ಸಂಪರ್ಕಿತರಾಗಿರುತ್ತಾರೆ. ಇಮಾಮ್ ನಗರ ಕಂಟೈನ್‍ಮೆಂಟ್ ಝೋನ್‍ಗೆ ಹತ್ತಿರವಾದ ಆನೆಕೊಂಡ ಮತ್ತು ವಿನಾಯಕನಗರ ಸೇರಿ ಎರಡು ಹೊಸ ಪ್ರದೇಶಗಳಲ್ಲಿ ಪ್ರಕರಣ ದಾಖಲಾಗಿದ್ದು ಇಲ್ಲಿ ಸಹ ಹೊಸದಾಗಿ ಕಂಟೈನ್‍ಮೆಂಟ್ ಝೋನ್ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ  ಒಟ್ಟು 111 ಪ್ರಕರಣಗಳಿದ್ದು, ಅದರಲ್ಲಿ 4 ಜನ ಮೃತಪಟ್ಟಿದ್ದಾರೆ. ಇನ್ನು ಇಬ್ಬರು ಗುಣಮುಖರಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ 106 ಸಕ್ರಿಯ ಪ್ರಕರಣಗಳಿವೆ.  ಇಂದು 647 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು 732 ವರದಿಗಳು ನೆಗೆಟಿವ್ ಬಂದಿದ್ದುಇಲ್ಲಿವರೆಗೆ 3,149 ನೆಗೆಟಿವ್ ಎಂದು ವರದಿ ಬಂದಿದೆ. ಒಟ್ಟು 1430 ವರದಿಗಳು ಬರುವುದು ಬಾಕಿ ಇದೆ ಎಂದರು.

ಬಿಡುಗಡೆ ಕ್ರಮ : ರೋಗಿ ಸಂಖ್ಯೆ 585, 616 ಮತ್ತು 635 ಈ ಮೂರು ಜನ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಶಿಷ್ಟಾಚಾರದಂತೆ ಎಲ್ಲ ಪರೀಕ್ಷೆಗಳನ್ನು ನಡೆಸಲಾಗಿದೆ. ಇವರು ಏ.30 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ರಾಜ್ಯ ಸರ್ಕಾರದೊಂದಿಗೂ ಮಾತನಾಡಿದ್ದು ಇವರನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಇದಲ್ಲದೆ ಇನ್ನೂ ಮೂರು ಜನರು ಬಿಡುಗಡೆಗೆ ಸಿದ್ದರಾಗಿದ್ದಾರೆ. ಇದಕ್ಕೆ ಹಗಲಿರುಳು ಶ್ರಮಿಸುತ್ತಿರುವ ಸಿಜಿ ಆಸ್ಪತ್ರೆ ವೈದ್ಯರು, ಶುಶ್ರೂಷಕರು ಹಾಗೂ ಎಲ್ಲ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಹೃದಯ ರೋಗದಿಂದ ಬಳಲುತ್ತಿದ್ದ 18 ವರ್ಷದ ಯುವತಿ ರೋಗಿ ಸಂಖ್ಯೆ 581 ಇವರ ಕೋವಿಡ್ ಪರೀಕ್ಷೆ ಎರಡು ಸುತ್ತುಗಳಲ್ಲೂ ನೆಗೆಟಿವ್ ಎಂದು ಬಂದಿದೆ. ಆದರೆ ಹೃದ್ರೋಗದ ಕಾರಣಕ್ಕಾಗಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇವರನ್ನು ನಾಳೆ ವೈದ್ಯರ ಸಲಹೆ ಹಾಗೂ ಸರ್ಕಾರದ ಸೂಚನೆ ಮೇರೆಗೆ ನಗರದ ಬಾಪೂಜಿ ಅಥವಾ ಎಸ್‍ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಿಸಿ ಚಿಕಿತ್ಸೆ ಮುಂದುವರೆಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಇಂದಿನ ರೋಗಿ ಸಂಖ್ಯೆ 1247 ರೋಗಿ ಸಂಖ್ಯೆ 694 ರ ಸಂಪರ್ಕ, ರೋಗಿ ಸಂಖ್ಯೆಗಳಾದ 1248 ,1249, 1250 ಇವರು ರೋಗಿ ಸಂಖ್ಯೆ 662ರ ಸಂಪರ್ಕ, ರೋಗಿ ಸಂಖ್ಯೆ 1251 ಕಂಟೈನ್‍ಮೆಂಟ್ ಝೋನ್‍ನ ಸಂಪರ್ಕ, ರೋ.ಸಂ. 1252, 1253 ಇವರು ರೋಗಿ ಸಂಖ್ಯೆ 662ರ ಸಂಪರ್ಕ, ರೋ.ಸಂ 1254 1255 ಇವರು ರೋಗಿ ಸಂಖ್ಯೆ 633 ರ ಸಂಪರ್ಕಿತರಾಗಿದ್ದಾರೆ.

ರೋಗಿ ಸಂಖ್ಯೆ 1292, 1293 ಇವರು ರೋಗಿ ಸಂಖ್ಯೆ 976 ರ ಸಂಪರ್ಕಿತರು, ರೋಗಿ ಸಂಖ್ಯೆ 1309 ರೋ.ಸಂ 663 ರ ಸಂಪರ್ಕಿತರು. ರೋ.ಸಂ 1365 ಮತ್ತು 1366 ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆ, ರೋಗಿ ಸಂಖ್ಯೆ 1368 ಅಂತರ ರಾಜ್ಯ ಕೇರಳ ಪ್ರಯಾಣ ಹಿನ್ನೆಲೆ, 1369 ಅಂತರ ರಾಜ್ಯ ಅಹಮದಾಬಾದ್, ರೋ.ಸಂ 1370 ಮತ್ತು 1371 ರೋಗಿ ಸಂಖ್ಯೆ 976 ರ ಸಂಪರ್ಕ, ರೋ.ಸಂ 1372 ಇವರು ರೋಗಿ ಸಂಖ್ಯೆ 556 ರ ಸಂಪರ್ಕ, ರೋ.ಸಂ 1373 ಇವರು ರೋಗಿ ಸಂಖ್ಯೆ 662 ರ ಸಂಪರ್ಕಿತರು. ರೋಗಿ ಸಂಖ್ಯೆ 1378 ಕಂಟೈನ್‍ಮೆಂಟ್ ಝೋನ್‍ನ ಸಂಪರ್ಕ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ, ಎಸಿ ಮಮತಾ ಹೊಸಗೌಡರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಎಸ್‍ಓ ಡಾ.ರಾಘವನ್ ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top