ಡಿವಿಜಿ ಸುದ್ದಿ, ದಾವಣಗೆರೆ: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಬರೆದ ಆರೋಪದ ಮೇಲೆ ಒಬ್ಬ ಯುವಕನ್ನು ಬಂಧಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್ ಪಿ ಹನುಮಂತರಾಯ ಅವರು, ಶಿವಮೊಗ್ಗದಲ್ಲಿ ಪತ್ತೆಯಾದ 8 ಕೊರೊನಾ ಕೇಸ್ ಗಳು ಗುಜರಾತಿನಿಂದ ಬಂದವರಾಗಿದ್ದಾರೆ. ಸೋಂಕಿತರು ಗುಜರಾತಿನ ನಮೋ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಬಿಜೆಪಿ ಕಾರ್ಯಕರ್ತರು. ಇದಕ್ಕೆ ಏನೆಂದು ಹೆಸರಿಡೋಣ ..? ನಮೋ ವೈರಸ್ ..? ಅಥವಾ ಬಿಜೆಪಿ ವೈರಸ್ ಎಂದು ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದನು ಎಂದರು.
ಈ ಸಂದೇಶ ಹರಿಬಿಟ್ಟ ರಘು ದೊಡ್ಮನಿ ಎಂಬುವರರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿನಯ್ ಎಂಬುವರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ವಿಚಾರಣೆ ಕೈಗೊಳ್ಳಲಾಗಿದೆ. ಈ ಬಗ್ಗೆ ಯುವ ಬಿಜೆಪಿ ಘಟಕದಿಂದಲೂ ಸಹ ದೂರು ನೀಡಲಾಗಿತ್ತು ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಡಿಹೆಚ್ಓ ಡಾ.ರಾಘವೇಂದ್ರ ಸ್ವಾಮಿ, ಎಸಿ ಮಮತಾ ಹೊಸಗೌಡರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಎಸ್ಓ ಡಾ.ರಾಘವನ್ ಇದ್ದರು.