ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 149 ಕೊರೊನಾ ಪಾಸಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ 22 ಪ್ರಕಣಗಳು ಪತ್ತೆಯಾಗಿದ್ದು, ಬೆಳಗಿನ ಬುಲೆಟಿನ್ ನಲ್ಲಿ 127 ಪ್ರಕರಣಗಳು ಪತ್ತೆಯಾಗಿದ್ದವು. ಈ ಮೂಲಕ ರಾಜ್ಯದಲ್ಲಿ ಒಂದೇ ದಿನ 149 ಸೋಂಕಿನ ಪ್ರಕರಣ ಪತ್ತೆಯಾದಂತಾಗಿದೆ.
ರಾಜ್ಯದಲ್ಲಿ ಈವರೆಗೂ 40 ಮಂದಿ ಸಾವಿಗೀಡಾಗಿದ್ದು, 543 ಮಂದಿ ಗುಣಮುಖರಾಗಿದ್ದಾರೆ. 811 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳ್ಳಾರಿ (61 ವರ್ಷ), ವಿಜಯಪುರ (65 ವರ್ಷ) ಹಾಗೂ ಬೆಂಗಳೂರಿನ (54 ವರ್ಷ) ವ್ಯಕ್ತಿ ಸಾವಿಗೀಡಾಗಿದ್ದಾರೆ.
ಸಂಜೆಯ ಪತ್ರಿಕಾ ಪ್ರಕಟಣೆ 19/05/2020.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept pic.twitter.com/ItCsttHKQW
— Karnataka Health Department (@DHFWKA) May 19, 2020
ಮಂಡ್ಯದಲ್ಲಿ 71 ಪ್ರಕರಣಗಳು, ದಾವಣಗೆರೆ 22 ಪ್ರಕರಣಗಳು, ಶಿವಮೊಗ್ಗದಲ್ಲಿ 12, ಕಲಬುರ್ಗಿಯಲ್ಲಿ 13, ಉತ್ತರ ಕನ್ನಡದಲ್ಲಿ ಮತ್ತು ಉಡುಪಿಯಲ್ಲಿ ತಲಾ 4, ಹಾಸನದಲ್ಲಿ 3, ಬಾಗಲಕೋಟೆಯಲ್ಲಿ 5, ಬೆಂಗಳೂರಿನಲ್ಲಿ 6 ಮಂದಿಗೆ ಸೋಂಕು, ರಾಯಚೂರು ಮತ್ತು ಬೀದರ್‌ನಲ್ಲಿ ತಲಾ 1 ಪ್ರಕರಣ ಹಾಗೂ ಹಸಿರು ವಲಯದಲ್ಲಿದ್ದ ಚಿಕ್ಕಮಗಳೂರಿನಲ್ಲಿ 5 ಪ್ರಕರಣಗಳು ದಾಖಲಾಗಿವೆ.