ಡಿವಿಜಿ ಸುದ್ದಿ, ದಾವಣಗೆರೆ : ಯುವ ಸಂಕಲ್ಪ ಪ್ರತಿಷ್ಠಾನ, ದಾವಣಗೆರೆ ವಿಶ್ವ ವಿದ್ಯಾನಿಲಯದ ಸಹಯೋಗದೊಂದಿಗೆ ನಗರದ ಚಿಕ್ಕನಳ್ಳಿ ಬಡಾವಣೆಯ ವಾರ್ಡ ನಂ. 32 ರಲ್ಲಿ ನೂರಾರು ಬಡಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ದಾವಣಗೆರೆ ವಿ.ವಿ ಕುಲಸಚಿವ ಪ್ರೊ. ಬಸವರಾಜ್ ಬಣಕಾರ್ ವಿತರಿಸಿದರು.

ಯುವ ಸಂಕಲ್ಪ ಪ್ರತಿಷ್ಠಾನ ಕಳೆದ ಒಂದು ತಿಂಗಳಿಂದ ದಾವಣಗೆರೆ ನಗರ ಹಾಗು ಕೈದಾಳ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದಾನಿಗಳ ಸಹಕಾರದಿಂದ ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸುತ್ತಾ ಬಂದಿದೆ.
ಮಾಜಿ ಮೇಯರ್, ಹಾಲಿ ಸದಸ್ಯರು ಉಮಾ ಪ್ರಕಾಶ್ ಸಹಾಯದದಿಗೆ ನೂರಾರು ಬಡ ಕುಟುಂಬಗಳನ್ನು ಗುರುತಿಸಲಾಗಿತ್ತು. ದಾವಣಗೆರೆ ವಿ.ವಿ ಯ ಕುಲಪತಿಗಳಾದ ಪ್ರೊ. ಶರಣಪ್ಪ ಪಿ ಹಲಸೆ , ಕುಲಸಚಿವ ಪ್ರೊ.ಬಸವರಾಜ್ ಬಣಕಾರ ಸಹಾಯಹಸ್ತ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ತೆರಿಗೆ ನಿರ್ವಹಣೆ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಎ.ವೈ. ಪ್ರಕಾಶ್ ಉಪಸ್ಥಿತರಿದ್ದರು.



