ಡಿವಿಜಿ ಸುದ್ದಿ, ದಾವಣಗೆರೆ: ನಗರದ ವರ್ತಕರು ಅಂಗಡಿ ಮುಗ್ಗಟು ತೆರೆಯಲು ಸ್ವಯಂ ಘೋಷಣಾ ಪತ್ರಕ್ಕಾಗಿ ದಾವಣಗೆರೆ ಮಹಾನಗರ ಪಾಲಿಕೆ ಕಚೇರಿ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ. ಆನ್ ಲೈನ್ ನಲ್ಲಿ ಪಾಲಿಕೆಯ ವೆಬ್ ಸೈಟ್ ನಲ್ಲಿ ಅರ್ಜಿ ತುಂಬಿದರೆ ಸ್ವಯಂ ಘೋಷಣಾ ಪತ್ರ ದೊರೆಯಲಿದೆ ಎಂದು ಪಾಲಿಕೆಯ ತೆರಿಗೆ ನಿರ್ವಹಣೆ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಹಿನ್ನಲೆ ನಗರದಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ನಗರದ ವರ್ತಕರು ಅಂಗಡಿ ಮುಗ್ಗಟು ತೆರೆಯಲು ಸ್ವಯಂ ಘೋಷಣಾ ಪತ್ರದ ಅವಶ್ಯಕತೆ ಇದೆ. ದಾವಣಗೆರೆ ಮಹಾನಗರ ಪಾಲಿಕೆಯ ಈ ವೆಬ್‌ಸೈಟ್ ಈ ಲಿಂಕ್ ನ್ನು http://www.davanagerecity.mrc.gov.in/ಕ್ಲಿಕ್ ಮಾಡಿ, ಸೂಕ್ತ ಮಾಹಿತಿ ತುಂಬಿದರೆ ಸ್ವಯಂ ಘೋಷಣಾ ಪತ್ರ ದೊರೆಯಲಿದೆ ಎಂದು ತಿಳಿಸಿದರು.
https://www.facebook.com/permalink.php?story_fbid=239234787503404&id=105586904201527



