ಡಿವಿಜಿ ಸುದ್ದಿ, ಚನ್ನಗಿರಿ: ಪಟ್ಟಣದ ಮನೆಯೊಂದರಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ 92 ಗ್ರಾಂ ತೂಕದ ಬಂಗಾರದ, 380 ಗ್ರಾಂ ತೂಕದ ಬೆಳ್ಳಿ ಆಭರಣಳನ್ನು ಕಳ್ಳತನ ಮಾಡಿದ್ದರು. ದ್ವಿಚಕ್ರ ವಾಹನ ಸೇರಿ ಸುಮಾರು 4 ಲಕ್ಷ ಮೌಲ್ಯದ ಈ ವಸ್ತುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್ ಪಿ ಹನುಮಂತರಾಯ ತಿಳಿಸಿದರು.
ಸಂತೇಬೆನ್ನೂರು ಪೋಲೀಸ್ ಠಾಣೆಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಪಿಗಳು ಏಪ್ರಿಲ್ 16 ರಂದು ಪಟ್ಟಣದ ಮನೆಯೊಂದರಲ್ಲಿ ಕಳುವು ಮಾಡಿ ಪರಾರಿಯಾಗಿದ್ದರು. ಆರೋಪಿಗಳನ್ನು ಅಮ್ಜಾದ್ ಖಾನ್ ಮತ್ತು ಸುಹೀಲ್ ಖಾನ್ ಎಂದು ಗುರುತಿಸಲಾಗಿದೆ. ಕದ್ದು ವಸ್ತುಗಳನ್ನು ಮಾರಟ ಮಾಡಲು ಯತ್ನಿಸಿದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.
ಕಳ್ಳರಿಗೆ ಬಲೆ ಬೀಸಿದ ಆರ್ ಆರ್ ಪಾಟೀಲ್ ನೇತೃತ್ವದ ತಂಡ
ಚನ್ನಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅರೋಪಿಗಳ ಪತ್ತೆಗಾಗಿ ಚನ್ನಗಿರಿ ವಿಭಾಗದ ಉಪಾದೀಕ್ಷರಾದ ಪ್ರಶಾಂತ್ ಮುನ್ನೊಳಿ ರವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಪೋಲೀಸ್ ಠಾಣೆಯ ಪಿಎಸ್ಐ ಶಿವರುದ್ರಪ್ಪ ಎಸ್ ಎಸ್ ಮೇಟಿ ರವರನ್ನೊಳಗೊಂಡ ಕ್ರೈಂ ವಿಭಾಗದ ಪಿಎಸ್ಐ ರೂಪ್ಲಿಬಾಯಿ ಹಾಗೂ ಸಿಬ್ಬಂದಿಗಳಾದ ಧರ್ಮಪ್ಪ, ರುದ್ರೇಶ್ ಹೆಚ್ ಸಿ , ರುದ್ರೇಶ್ ಎಸ್ಆರ್ . ಮಂಜುನಾಥ್ ಪ್ರಸಾದ್ , ಕೊಟ್ರೇಶ್ , ಮಹಮದ್ ರಫೀಕ್ , ಪರಶುರಾಮ್ ಸೇರಿದಂತೆ ತಂಡವನ್ನು ಒಳಗೊಂಡ ವೃತ್ತನಿರೀಕ್ಷ ಆರ್ ಆರ್ ಪಾಟೀಲ್ ನೇತೃತ್ವದದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಹೇಳಿದರು.



