Connect with us

Dvgsuddi Kannada | online news portal | Kannada news online

ದಾವಣಗೆರೆ: ಪೊಲೀಸ್ ಪೇದೆ ಸಹಿತ 3 ಕೊರೊನಾ ಪಾಸಿಟಿವ್; 88 ಸೋಂಕಿತರು, 82 ಸಕ್ರಿಯ, ಇನ್ನು 545 ವರದಿ ಬಾಕಿ

ಪ್ರಮುಖ ಸುದ್ದಿ

ದಾವಣಗೆರೆ: ಪೊಲೀಸ್ ಪೇದೆ ಸಹಿತ 3 ಕೊರೊನಾ ಪಾಸಿಟಿವ್; 88 ಸೋಂಕಿತರು, 82 ಸಕ್ರಿಯ, ಇನ್ನು 545 ವರದಿ ಬಾಕಿ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಇಂದು ಹೊಸದಾಗಿ 3 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು,  ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ಪ್ರತ್ಯೇಕವಾಗಿರಿಸುವ ಹಾಗೂ ಅವರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ  ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಇಂದು ಪತ್ತೆಯಾದ ಮೊದಲ ಪಾಸಿಟಿವ್  ರೋಗಿ ಸಂಖ್ಯೆ 960  40 ವರ್ಷದ ಪುರುಷನಾಗಿದ್ದು, ಪಿ-852 ಅವರ  ಮನೆ ಮೇಲೆ ಬಾಡಿಗೆ ಇದ್ದರು. ಇವರು 10 ಜನ ಪ್ರಾಥಮಿಕ ಮತ್ತು 21 ಜನ ದ್ವಿತೀಯ ಸಂಪರ್ಕಿತರನ್ನು ಈಗಾಗಲೇ ಐಸೋಲೇಟ್ ಮಾಡಿ ಸ್ವಾಬ್ ಸಂಗ್ರಹ ಕಾರ್ಯ ನಡೆಯುತ್ತಿದೆ.

ರೋಗಿ ಸಂಖ್ಯೆ 975 ಇವರು 34 ವರ್ಷದ ಪುರುಷ ಆಗಿದ್ದು ಇವರು ಕೆಟಿಜೆ ನಗರ ಕಂಟೈನ್‍ಮೆಂಟ್ ಝೋನ್‍ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಟ್ರಾಫಿಕ್ ಪೊಲೀಸ್ ಪೇದೆಯಾಗಿದ್ದು ಇವರು ಈಗಾಗಲೇ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದರು. ಇವರ 9 ಜನ ಪ್ರಾಥಮಿಕ ಮತ್ತು 32 ಜನ ದ್ವಿತೀಯ ಸಂಪರ್ಕಿತರನ್ನು ಐಸೋಲೇಷನ್‍ನಲ್ಲಿರಿಸಿ ಇವರ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನು ರೋಗಿ ಸಂಖ್ಯೆ 976 ಇವರು 32 ವರ್ಷದ ಪುರುಷ ಆಗಿದ್ದು ಶೀತ ಜ್ವರದಂತಹ ಪ್ರಕರಣದವರಾಗಿದ್ದು ಇವರು ಈ ಹಿಂದೆ ಚಿಕನ್ ಬಿರಿಯಾನಿ ಅಂಗಡಿ ನಡೆಸುತ್ತಿದ್ದರು. ಈಗ ಕೆಲವು ದಿನಗಳಿಂದ ನಗರದ ಎಂಬಿಆರ್ ಟ್ರೇಡರ್ಸ್ ಇವರಿಂದ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಖರೀದಿಸಿ ತಳ್ಳುಗಾಡಿಯಲ್ಲಿ ಹೈಸ್ಕೂಲ್ ಮೈದಾನದ ಸುತ್ತಮುತ್ತ ಮತ್ತು ವಿನಾಯಕ ಮೆಡಿಕಲ್ಸ್ ಸುತ್ತಮುತ್ತ ಮಾರಾಟ ಮಾಡುತ್ತಿದ್ದರೆಂದು ಹೇಳಿರುತ್ತಾರೆ.

ಇವರ ಮನೆ ಪಿಜೆ ಬಡಾವಣೆಯ ರೈತರ ಬೀದಿಯಲ್ಲಿದ್ದು ರೈತರ ಬೀದಿಯನ್ನು ಕಂಟೈನ್‍ಮೆಂಟ್ ಝೋನ್ ಮಾಡಲು ಈಗಾಗಲೇ ಸರ್ವೇ ಮಾಡಲಾಗಿದೆ. ಇವರಿಗೆ 8 ಜನ ಪ್ರಾಥಮಿಕ ಮತ್ತು 16 ಜನ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಐಸೋಲೇಟ್ ಮಾಡಿ ಸ್ವಾಬ್ ಸಂಗ್ರಹಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 88 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು 2 ಗುಣಮುಖ, 4 ಮೃತಪಟ್ಟಿದ್ದು 82 ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 385 ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈವತ್ತು 160 ನೆಗೆಟಿವ್ ಎಂದು ವರದಿ ಬಂದಿದೆ. ಬಾಕಿ 545 ವರದಿ ಬರಬೇಕಿದ್ದು, ರೋಗಿ ಸಂಖ್ಯೆ 976 ಓಡಾಡಿದ ಬೀದಿ ಬೀದಿಗಳಲ್ಲಿ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top