ನವದೆಹಲಿ: ದೇಶದಲ್ಲಿ ಒಂದೇ ದಿನದಲ್ಲಿ 3,525 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 121 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 78,055ಕ್ಕೆ ಏರಿಕೆಯಾಗಿದೆ. ಈ ಪೈಕಿ 26,400 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 2,551 ಮಂದಿ ಸೋಂಕಿಗೆ ಮೃತಪಟ್ಟಿದ್ದು, 49,104 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರ ರಾಜ್ಯ ಒಂದರಲ್ಲಿಯೇ 53 ಮಂದಿ ಮೃತಪಟ್ಟಿದ್ದು, ಇಡೀ ದೇಶದಲ್ಲಿ 974 ಮಂದಿ ಮೃತಪಟ್ಟಿದ್ದಾರೆ. ಇತ್ತ ಗುಜರಾತ್‌ನಲ್ಲಿ 9,265ಪ್ರಕರಣಗಳು ಪತ್ತೆಯಾಗಿದ್ದು, 561 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ 8,045, ತಮಿಳುನಾಡಿನಲ್ಲಿ 9,463 ಮಂದಿ, ಕರ್ನಾಟಕದಲ್ಲಿ 959ಕ್ಕೆ ಕೊರೊನಾ ಪ್ರಕಣ ಪತ್ತಯಾಗಿದ್ದಾರೆ.



