ಡಿವಿಜಿ ಸುದ್ದಿ, ದಾವಣಗೆರೆ : ಕೋವಿಡ್-19 ಲಾಕ್ ಡೌನ್ ಪರಿಣಾಮವಾಗಿ ದೇಶದ ಆರ್ಥಿಕ ಚಟುವಟಿಕೆಗಳು ಪುನಶ್ಚೇತನಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಯೋಜನೆ ಅಡಿಯಲ್ಲಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಸಣ್ಣ ಉದ್ಯಮದ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಹಣಕಾಸು,ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ. ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಲಾಕ್ ಡೌನ್ ನಿಂದ ಎಂ.ಎಸ್.ಎಂ.ಇ ಮತ್ತು ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಂಕಷ್ಠಕ್ಕೀಡಾಗಿದ್ದು, ಕಾರ್ಮಿಕರ ಬ್ಯಾಂಕಿನ ಸಾಲ ಮರುಪಾವತಿ, ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಇಲ್ಲದೆ ಸಣ್ಣ ಹಾಗು ಮಧ್ಯಮ ಗಾತ್ರದ ಕಾರ್ಖಾನೆಗಳು ನಲುಗಿಹೋಗಿದ್ದವು. ಇಂತಹ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ್ ಭಾರತ್ ಅಭಿಯಾನದ ಆರ್ಥಿಕ ಪ್ಯಾಕೇಜ್ ಕಾರ್ಮಿಕರ ಹಿತ ಕಾಪಾಡುವುದರ ಜೊತೆಗೆ ಆರ್ಥಿಕ ಚೇತರಿಕೆಯ ಆಶಾಭಾವ ಮೂಡಿಸಿದೆ ಎಂದಿದ್ದಾರೆ.
ಲಾಕ್ ಡೌನ್ ನಿಯಮ ಸಡಿಲಿಸಿದರೂ ಕಚ್ಚಾ ವಸ್ತುಗಳ ಖರೀದಿಗೆ ಬಂಡವಾಳ ವಿಲ್ಲದೆ ಆರ್ಥಿಕ ಮುಗ್ಗಟ್ಟಿನಲ್ಲಿದ್ದ, 45 ಲಕ್ಷ ಕ್ಕು ಅಧಿಕ ಕಾರ್ಖಾನೆಗಳಿಗೆ ಮೂರು ಲಕ್ಷ ಕೋಟಿ ಆಧಾರ ರಹಿತ ನೆರವು ಎಂ.ಎಸ್.ಎಂ.ಇ ಗಳ ಹಿತ ಕಾಪಾಡಿದೆ. ಇದರ ಜೊತೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ (ಪಿ.ಎಂ.ಜಿ.ಕೆ.ಪಿ) ಮೂಲಕ 72 ಲಕ್ಷಕ್ಕು ಅಧಿಕ ಕಾರ್ಮಿಕರಿಗೆ ಕಳೆದ ಮೂರು ತಿಂಗಳು ಮತ್ತು ಮುಂದಿನ ಮೂರು ತಿಂಗಳು ಸರ್ಕಾರವೇ ಭರಿಸಲಿದ್ದು ಇದಕ್ಕಾಗಿ 2500 ಕೋಟಿ ನೆರವು ನೀಡಿರುವುದು ಕಾರ್ಮಿಕರಿಗೆ ನೆರವು ಒದಗಿದೆ.
ಸಾಲಾ ಮರು ಪಾವತಿ ಮಾಡಲಾಗದೆ (ಎನ್.ಪಿ.ಎ) ಹಂತಕ್ಕೆ ತಲುಪಿದ್ದ ಎಂ.ಎಸ್ ಎಂ.ಇ ಗಳಿಗೆ ಬ್ಯಾಂಕ್ ಹಾಗು ಎನ್.ಬಿ.ಎಫ್.ಸಿ ಮೂಲಕ 20000 ಕೋಟಿಗಳ ನೆರವು ಹಾಗು 50000 ಕೋಟಿ ಬಂಡವಾಳ ಹೂಡಿಕೆಯ ಕ್ರಮ ವಹಿಸಿದೆ. ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೊಸ ಚೈತನ್ಯದೊಂದಿಗೆ ತಮ್ಮ ಉದ್ಯಮ ಮರು ಸ್ಥಾಪಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಆತಂಕದ ವಾತಾವರಣದಲ್ಲಿದ್ದ ಕೈಗಾರಿಕಾ ಕ್ಷೇತ್ರ ಮತ್ತು ಅದರಿಂದಲೇ ಜೀವನ ಕಟ್ಟಿಕೊಂಡಿದ್ದ ಕಾರ್ಮಿಕರು ಮತ್ತು ಅದರ ಕುಟುಂಬ ಪುನಶ್ಚೇತನ ಆಶಾಕಿರಣವಾದ ಸುಮಾರು 6 ಲಕ್ಷ ಕೋಟಿ ಪ್ಯಾಕೇಜ್ ಘೋಶಿಸಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರಿಗೆ ಅಭಿನಂದನೆಗಳು ಎಂದಿದ್ದಾರೆ.



