ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಘೋಷಿಸಿದ್ದ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್ನ ವಿವರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಜೆ 4 ಗಂಟೆಗೆ ಹಂಚಿಕೊಳ್ಳಲಿದ್ದಾರೆ.
Finance Minister Smt. @nsitharaman will address a Press Conference today, 13th May 2020, at 4 PM in New Delhi.#EconomicPackage#AatmanirbharBharat #AatmaNirbharBharatAbhiyan #IndiaFightsCorona pic.twitter.com/FmKcItA23C
— Ministry of Finance (@FinMinIndia) May 13, 2020
ದೇಶವನ್ನು ಉದ್ದೇಶಿಸಿ ನಿನ್ನೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್ ತಡೆಯಲು ಘೋಷಿಸಿದ್ದ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಆರ್ಥಿಕ ಪುನಶ್ಚೇತನ ಮತ್ತು ಬಡವರಿಗೆ ನೆರವಾಗಲು ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ತಮ್ಮ ಭಾಷಣದಲ್ಲಿಯೇ ಪ್ಯಾಕೇಜ್ ವಿವರಗಳನ್ನು ಹಣಕಾಸು ಸಚಿವರು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದ್ದರು.
ಪ್ರಧಾನಿ ಭಾಷಣದ ನಂತರ ಸರಣಿ ಟ್ವೀಟ್ ಮಾಡಿದ್ದ ಹಣಕಾಸು ಸಚಿವರು, ಇದು ಕೇವಲ ಪ್ಯಾಕೇಜ್ ಅಲ್ಲ, ಆರ್ಥಿಕ ಸ್ಥಿತಿ ಸುಧಾರಣೆಗೆ ಮುನ್ನುಡಿ ಆಗಲಿದೆ ಎಂದಿದ್ದಾರೆ. ಪ್ರಧಾನಿ ಘೋಷಿಸಿದ ಆತ್ಮನಿರ್ಭರ ಭಾರತ ಅಭಿಯಾನವು ಬೀದಿ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಮಧ್ಯಮ ವರ್ಗ, ತಯಾರಿಕೆದಾರರು ಸೇರಿದಂತೆ ಎಲ್ಲರನ್ನೂ ಒಳಗೊಳ್ಳಲಿದೆ ಎಂದು ಹೇಳಿದ್ದಾರೆ.



