ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್‍ ಹೋಂಗಳು ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು : ಡಿಸಿ ಸೂಚನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಡಿವಿಜಿ ಸುದ್ದಿ, ದಾವಣಗೆರೆ: ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳು ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು. ಶುಶ್ರೂಷಕರು, ಸಿಬ್ಬಂದಿಗಳು ಕೂಡ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಗಟೇರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಪ್ರತ್ಯೇಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು. ಚಿಗಟೇರಿ ಆಸ್ಪತ್ರೆ ಕೇವಲ ಕೊರೊನಾ ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡುವ ಕೋವಿಡ್ ಆಸ್ಪತ್ರೆ ಎಂದು ಆದೇಶಿಸಲಾಗಿದೆ ಹಾಗೂ ಬಾಪೂಜಿ ಆಸ್ಪತ್ರೆಯು ಸಾರ್ವಜನಿಕ ಆಸ್ಪತ್ರೆಯಾಗಿ ಇತರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಮುಂದಿನ ಆದೇಶದವರೆಗೆ ನೀಡಲಿದೆ. ಇತರೆ ಆರೋಗ್ಯ ಸಮಸ್ಯೆಗಳಿಗೆ ಬರುವ ರೋಗಿಗಳನ್ನು ಇತರೆ ಎಲ್ಲ ಖಾಸಗಿ ಆಸ್ಪತ್ರಗಳಿಗೆ ಕಳುಹಿಸಲಾಗುವುದು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಚಿಕಿತ್ಸೆ ಪಡೆದುಕೊಳ್ಳಬಹುದು.

ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ 40 ಬೆಡ್‍ಗಳ ಮಕ್ಕಳ ಎಸ್‍ಎನ್‍ಸಿಯು ಮತ್ತು ಒಬಿಜಿ ವಿಭಾಗ ಇದ್ದು ಇಲ್ಲಿಗೆ ಅನೇಕ ಗ್ರಾಮೀಣ ಮಕ್ಕಳು ಬರುತ್ತಾರೆ. ಆದ್ದರಿಂದ ಮುಖ್ಯ ಕಟ್ಟಡಕ್ಕೆ ಸಂಪರ್ಕಕ್ಕೆ ಬಾರದಂತೆ ಅವುಗಳಿಗೆ ಸಂಪೂರ್ಣ ಬ್ಯಾರಿಕೇಡ್ ಮಾಡಿ ಅಲ್ಲಿಂದ ಕೋವಿಡ್ ಆಸ್ಪತ್ರೆಗೆ ಯಾವುದೇ ರೀತಿಯ ಸಂಪರ್ಕ ಇರದಂತೆ ಕ್ರಮ ವಹಿಸಲಾಗುವುದು.

ಸಿಜಿ ಆಸ್ಪತ್ರೆಯ ವೈದ್ಯರು, ನಗರದ ಎಲ್ಲ ಆಸ್ಪತ್ರೆಗಳ ತಜ್ಞ ವೈದ್ಯರು ಮತ್ತು ಜೆಜೆಎಂ ಮತ್ತು ಎಸ್‍ಎಸ್ ಮೆಡಿಕಲ್ ಕಾಲೇಜಿನ ಎರಡೂ ಕಾಲೇಜುಗಳ ತಜ್ಞ ವೈದ್ಯರು, ಮುಖ್ಯಸ್ಥರು ತಂಡ ರಚಿಸಿಕೊಂಡು ಬೆಂಗಳೂರಿನ ರಾಜೀವ್‍ಗಾಂಧಿ ಹೆಲ್ತ್ ಸೈನ್ಸಸ್‍ನಲ್ಲಿ ಹೇಗೆ ತಜ್ಞವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆಂಬುದನ್ನು ಅಧ್ಯಯನ ಮಾಡಿ ಅದೇ ರೀತಿಯಲ್ಲಿ ಗಂಭೀರ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಜೆಜೆಎಂ ಮೆಡಿಕಲ್ ಕಾಲೇಜಿನ ಮತ್ತು ಕ್ರಿಟಿಕಲ್ ಕೇರ್‍ನ ಮುಖ್ಯಸ್ಥರಾದ ಡಾ. ರವಿ ತೀವ್ರ ಉಸಿರಾಟದ ತೊಂದರೆ ಮತ್ತು ಇತರೆ ಸಮಸ್ಯೆಗಳಿಗೆ ಹೇಗೆ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಚಿಗಟೇರಿ ಆಸ್ಪತ್ರೆಯಲ್ಲಿನ ಒಂದು ರೋಗಿಗೆ ನೀಡಲಾದ ಚಿಕಿತ್ಸೆಯ ಯಶೋಗಾಥೆಯನ್ನು ಇವರು ವಿವರಿಸುವರು ಎಂದರು.

ಕೋವಿಡ್ ಗುಣಮುಖವಾಗುವತ್ತ ಹೃದ್ರೋಗಿ : ಜೆಜೆಎಂ ಮೆಡಿಕಲ್ ಕಾಲೇಜಿನ ಅನಸ್ತೇಷಿಯಾ ಮತ್ತು ಕ್ರಿಟಿಕಲ್ ಕೇರ್‍ನ ಮುಖ್ಯಸ್ಥರಾದ ಡಾ. ರವಿ ಮಾತನಾಡಿ, ಮೇ 1 ಕ್ಕೆ ಕೊರೊನಾ ಪಾಸಿಟಿವ್ ವರದಿ ಬಂದ 18 ವರ್ಷದ ಯುವತಿ ರೋಗಿ ಸಂಖ್ಯೆ : 584 ಇವರು ಸಿಜಿ ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ. ಬಹಳ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಗಂಭೀರ ಹೃದಯ ರೋಗ ಇದೆ. ಇಂತಹ ರೋಗಿಗೆ ಸೋಂಕು ತಗಲುವ ಸಾಧ್ಯತೆ ಯಥೇಚ್ಚವಾಗಿರುತ್ತದೆ. ಆಕ್ಸಿಜನ್ ಥೆರಪಿ ನಂತರವೂ ಇವರ ರಕ್ತದಲ್ಲಿ ಶೇ.70 ಸ್ಯಾಚುರೇಷನ್ ಇದ್ದು, ಇವರನ್ನು ಉಳಿಸಲು ತಜ್ಞ ವೈದ್ಯರ ತಂಡ ಐಸಿಯುಯಲ್ಲಿ ಚಿಕಿತ್ಸೆ ನಡೆಸಲು ನಿರ್ಧರಿಸಿ ಮೇ 5 ಕ್ಕೆ ಐಸಿಯುಗೆ ಶಿಫ್ಟ್ ಮಾಡಿ ಪಾಶ್ಚಿಮಾತ್ಯ ದೇಶಗಳಲ್ಲಿ ನೀಡುವಂತೆ ಹೈಫ್ಲೋ ಆಕ್ಸಿಜನ್ ಜೊತೆಗೆ ಔಷಧೋಪಚಾರ, ಹೃದಯರೋಗಕ್ಕೂ ಸೂಕ್ತ ಚಿಕಿತ್ಸೆಯನ್ನು ನೀಡಿ ನಿಯಂತ್ರಣಕ್ಕೆ ತರಲಾಗುತ್ತದೆ. ಪ್ರಸ್ತುತ ಆ ರೋಗಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ಈಗ ಎದ್ದು ಓಡಾಡುವ ಸ್ಥಿತಿಗೆ ಬಂದಿದ್ದಾರೆ.

ಮುಂದಿನ ದಿನಗಳಲ್ಲಿ ಅವರನ್ನು ಐಸಿಯು ಯಿಂದ ಹೊರತಂದು ಚಿಕಿತ್ಸೆ ಮುಂದುವರೆಸಲಿದ್ದೇವೆ. ಇದನ್ನು ಯಾಕೆ ಹೇಳಿದೆ ಅಂದರೆ ಎಂತಹ ಗಂಭೀರ ಸ್ಥಿತಿಯನ್ನೂ ಎದುರಿಸುವ ತಜ್ಞ ವೈದ್ಯರು, ಸೌಲಭ್ಯ ನಮ್ಮಲ್ಲಿ ಇದೆ. ಯಾವುದೇ ಸಾರ್ವಜನಿಕರು ಹೆದರಬೇಕಾದ ಅವಶ್ಯಕತೆ ಇಲ್ಲ. ಶೇ.80 ಕೊರೊನಾ ಸೋಂಕಿತರು ವಾಸಿಯಾಗುತ್ತಾರೆ. ಇನ್ನು ಶೇ 20 ರಲ್ಲಿ ಶೇ.15 ಜನರನ್ನು ಆಕ್ಸಿಜನ್ ಥೆರಪಿ ನೀಡಿ ಗುಣಪಡಿಸಬಹುದು. ಮತ್ತು ಇನ್ನುಳಿದ ಶೇ.5 ವೃದ್ಯಾಪ್ಯ ಡಯಾಬಿಟಿಸ್, ಹೃದ್ರೋಗ ಇತರೆ ಸಮಸ್ಯೆ ಇರುವವರಿಗೆ ಮಾತ್ರ ವೆಂಟಿಲೇಟರ್ ಅವಶ್ಯಕತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಭಯ ಬೀಳುವ ಅವಶ್ಯಕತೆ ಇಲ್ಲ. ಎಲ್ಲರೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದರು.

ಪತ್ರಿಕಾಗೋಷ್ಟಿಯಲ್ಲಿ ಕೊರೊನಾ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಇದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *