Connect with us

Dvgsuddi Kannada | online news portal | Kannada news online

ನಮ್ಮ ಸನಾತನ ಸಂಸ್ಕೃತಿ ಸಂಸ್ಕಾರ ಜೀವನಕ್ಕೆ ಮೌಲ್ಯ :ಇಂದ್ರಾನಿಲ್ ಬಾಂಜಾ

ದಾವಣಗೆರೆ

ನಮ್ಮ ಸನಾತನ ಸಂಸ್ಕೃತಿ ಸಂಸ್ಕಾರ ಜೀವನಕ್ಕೆ ಮೌಲ್ಯ :ಇಂದ್ರಾನಿಲ್ ಬಾಂಜಾ

ಡಿವಿಜಿಸುದ್ದಿ ಕಾಂ, ದಾವಣಗೆರೆ: ನಮ್ಮ ಜೀವನದ ಸಾರ್ಥಕತೆಗೆ ಭಾರತೀಯ ಆಧ್ಯಾತ್ಮ ಪರಂಪರೆಗಳು ಸೂಕ್ತ ಮಾರ್ಗದರ್ಶನವಾಗಿರುತ್ತದೆ ನಮ್ಮ ನಾಡಿನ ಆಧ್ಯಾತ್ಮ ಗುರು ಪರಂಪರೆಗಳು ನಮ್ಮ ಸನಾತನ ಸಂಸ್ಕೃತಿ, ಸಂಸ್ಕಾರ ಜೀವನಕ್ಕೆ ಮೌಲ್ಯ ತಂದುಕೊಡುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಇಂದ್ರಾನಿಲ್ ಬಾಂಜಾರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಹೊರವಲಯದ ಬಾಡಾ ಕ್ರಾಸ್ ಹತ್ತಿರವಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಗುರು ಕುಮಾರೇಶ್ವರ ವೇದಿಕೆಯಲ್ಲಿ ದಾವಣಗೆರೆಯ ರಾಜ್ಯ ಮಟ್ಟದ ಕನ್ನಡ ಭಜನಾ ಸ್ಪರ್ಧೆಯ ಸಮಿತಿವತಿಯಿಂದ ಪುಣ್ಯಾಶ್ರಮದ ನೂತನ ಶಿಲಾ ಮಂಟಪದ ನಿರ್ಮಾಣಕ್ಕೆ ದೇಣ ಗೆ ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ, ಎ.ಪಿ.ಎಂ.ಸಿ. ಉಪಾಧ್ಯಕ್ಷರದ ಎಸ್.ಕೆ.ಚಂದ್ರಶೇಖರ್, ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುಣ್ಯಾಶ್ರಮದ ಗೌರವ ಕಾರ್ಯದರ್ಶಿಗಳಾದ ಎ.ಹೆಚ್.ಶಿವಮೂರ್ತಿಸ್ವಾಮಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ನಾಡು-ನುಡಿಗಳ ಪರಿಕಲ್ಪನೆ ಜನಪದ, ಭಜನಾ ಸಂಸ್ಕøತಿಗಳು ಮರೆಯಾಗುತ್ತಿರುವುದು ವಿಷಾದದ ಸಂಗತಿ.

ನವ ಯುವ ಪೀಳಿಗೆಗಳಿಗೆ ಈ ಸಂಸ್ಕøತಿಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ನಮ್ಮ ನಾಡಿನ ಗ್ರಾಮೀಣ ಸೊಗಡಿನ ಕಲಾಪ್ರಕಾರಗಳ ಕಾಳಜಿ ಬಿತ್ತುವ ನಿಟ್ಟಿನಲ್ಲಿ ಸಂಘಟನೆಗಳು ಕಾರ್ಯನಿರ್ವಹಿಸಬೇಕಿದೆ, ಭಜನೆ, ಸಂಗೀತ ಕೇವಲ ಮನರಂಜನೆಗಳಿಗಷ್ಟೇ ಸೀಮಿತವಲ್ಲ ಮಾನಸಿಕ ನೆಮ್ಮದಿ, ಖಿನ್ನತೆಗಳ ಮನಸ್ಸುಗಳು ಪುಳಕಿತಗೊಳಿಸುವ ಹಂತದಲ್ಲೂ ಫಲಕಾರಿಯಾಗುತ್ತದೆ ಎಂದರು.

ಪುಣ್ಯಾಶ್ರಮದ ನೂತನ ಶಿಲಾ ಮಂಟಪದ ನಿರ್ಮಾಣಕ್ಕೆ ಭಜನಾ ಸಮಿತಿಯಿಂದ ದೇಣ ಗೆ ಕನ್ನಡ ಭಜನಾ ಸ್ಪರ್ಧೆ ಸಮಿತಿ ರೂವಾರಿಗಳಾದ ಎ.ಕೊಟ್ರಪ್ಪ ಕಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ, 4 ದಿನಗಳ ಕಾಲ ಯಶಸ್ವಿಯಾಗಿ ನಡೆದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಗೆ ತನು,ಮನ, ಧನಗಳಿದ ಸಹಕರಿಸಿ ಸಹಂಸಮರ್ಪಿಸಲಾಯಿತು.

ಪುಣ್ಯಾಶ್ರಮದ ಬಾಲ ಕಲಾವಿದರಿಂದ ಗೀತಗಾಯನದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಸಮಿತಿಯ ಪ್ರದಾನ ಕಾರ್ಯದರ್ಶಿ ಸಿ.ಮಂಜಪ್ಪ ಸಿರಿಗೆರೆ ಸ್ವಾಗತಿಸಿದರು.

ಸಾಲಿಗ್ರಾಮ ಗಣೇಶ್‍ಶೆಣೈ ಕಾರ್ಯಕ್ರಮ ನಿರೂಪಿಸಿದರು, ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಪುಣ್ಯಾಶ್ರಮದ ಬಾಲ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕೊನೆಯಲ್ಲಿ ಸಮಿತಿಯ ಅಧ್ಯಕ್ಷರಾದ ಸದಾನಂದಪ್ಪ ಕುಕ್ಕವಾಡ ವಂದಿಸಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top