ಡಿವಿಜಿ ಸುದ್ದಿ, ಹರಿಹರ : ರಾಜಸ್ತಾನ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ಕಡೆಯಿಂದ ಬಂದಿದ್ದ ಏಳು ಜನರನ್ನು ಗುತ್ತೂರು ಗ್ರಾಮದ ಅಲ್ಪಸಂಖ್ಯಾತ ಹಾಸ್ಟೆಲ್ ನಲ್ಲಿ ಕ್ವಾರೈಂಟೆನ್ ಮಾಡಲು ಮುಂದಾದ ಸಂದರ್ಭದಲ್ಲಿ ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಗುತ್ತೂರಿನ ವಿದ್ಯಾರ್ಥಿಗಳ ವಸತಿ ಗೃಹದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಆದೇಶದ ಮೇರೆಗೆ ದಾವಣಗೆರೆಯಲ್ಲಿದ್ದ ಸೋಂಕಿತರನ್ನು ಕ್ವರೆಂಟ್ ನಲ್ಲಿ ಇರಿಸಲು ಹರಿಹರ ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ ಮುಂದಾದಾಗ ಗುತ್ತೂರು ಗ್ರಾಮದ ಜನರು ಕಾರ್ಯಕ್ಕೆ ಅಡ್ಡಿಪಡಿಸಿ, ಇಲ್ಲಿ ಸೋಂಕಿತರನ್ನು ಇರಿಸುವುದು ಬೇಡ. ಬೇರೆ ಕಡೆ ಇರಿಸಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಮಾಜಿ ಶಾಸಕ ಬಿ.ಪಿ ಹರೀಶ್ ಭೇಟಿ ನೀಡಿ, ತಾಲೂಕಿನಲ್ಲಿ ಇದುವರೆಗೂ
ಯಾವುದೇ ಕೊರೋನಾ ಸೋಂಕು ಕಾಣಿಸಿಕೊಂಡಿಲ್ಲ. ಇಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ತಹಶೀಲ್ದಾರ್ ಅವರ ನಿರ್ಧಾರದಿಂದ ಇಲ್ಲಿನ ಜನರ ನೆಮ್ಮದಿ ಕೆಡಿಸುವುದು ಬೇಡ. ಸೋಂಕಿತರನ್ನು ಇಲ್ಲಿ ಹಿರಿಸುವುದು ಬೇಡ. ಇರಿಸಲು ನಾನು ಬಿಡುವುದಿಲ್ಲ ಎಂದು ಜನರಲ್ಲಿ ಧೈರ್ಯ ತುಂಬಿದರು.ನಂತರ ಸ್ಥಳಕ್ಕೆ ಎಸ್ ರಾಮಪ್ಪ ಬೇಟಿನೀಡಿ ಅಧಿಕಾರಿಗಳ ತಂಡವನ್ನು ಕೊಂಡಜ್ಜಿ ಗ್ರಾಮಕ್ಕೆ ತೆರಳಿದ್ದಾರೆ.



