ಡಿವಿಜಿ ಸುದ್ದಿ, ದಾವಣಗೆರೆ: ಕೋರಾನ ವೈರಸ್ ಸಂಕಷ್ಟ ದಿಂದ ರಾಜ್ಯದ್ಯಾಂತ ಲಾಕ್ ಡೌನ್ ನಿಂದಾಗಿ ಚಿನ್ನ ಬೆಳ್ಳಿ ಅಂಗಡಿಗಳನ್ನು ಸಕಾ೯ರದ ಆದೇಶದಂತೆ ಮುಚ್ಚಲಾಗಿದೆ. ಚಿನ್ನ, ಬೆಳ್ಳಿ ಕೆಲಸಗಾರರು ರಾಜ್ಯದಲ್ಲಿ ಸುಮಾರು 22 ಲಕ್ಷ ಕಿಂತಲೂ ಹೆಚ್ಚಿದ್ದಾರೆ.
ಲಾಕ್ ಡೌನ್ ನಿಂದ ಚಿನ್ನ, ಬೆಳ್ಳಿ ಕೆಲಸಗಾರರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕಳೆದ 45 ದಿನಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಚಿನ್ನ ಬೆಳ್ಳಿ ಕೆಲಸಗಾರರಿಗೆ ಸಕಾ೯ರ ದಿಂದ ಆಥಿ೯ಕ ನೆರವಿನ ಅವಶ್ಯಕತೆ ಇದ್ದು , ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಚಿನ್ನ ಬೆಳ್ಳಿ ಕೆಲಸಗಾರರಿಗೆ ಆಥಿ೯ಕ ನೆರವಿನ ಪ್ಯಾಕೇಜ್ ಘೋಷಿಸಬೆಕೇಂದು ದಾವಣಗೆರೆ ಚಿನ್ನ ಬೆಳ್ಳಿ ವರ್ತಕ ನಲ್ಲೂರು. ಎಸ್.ರಾಘವೇಂದ್ರ ಅವರು ಮನವಿ ಮಾಡಿದ್ದಾರೆ.

ಮುಖ್ಯ ಮಂತ್ರಿ ಬಿ ಎಸ್ ವೈ ರವರು ಈಗಾಗಲೇ ಆಟೋ ಡೈವರ್ ಗಳು, ಸವಿತ ಸಮಾಜದ ಮತ್ತು ಮಡಿವಾಳ ಸಮುದಾಯ ಸೇರಿದಂತೆ ಅನೇಕ ವೃತ್ತಿಪರ ಸಮುದಾಯಗಳಿಗೆ ಆಥಿ೯ಕ ಪ್ಯಾಕೇಜ್ ಘೋಷಿಸಿರುವುದು ಸ್ವಾಗಾತರ್ಹ, ಇದೇ ಮಾದರಿಯಲ್ಲಿ ನಮ್ಮ ಚಿನ್ನ ಬೆಳ್ಳಿ ಕೆಲಸಗಾರರಿಗೆ ಆಥಿ೯ಕ ನೆರವಿನ ಪ್ಯಾಕೇಜ್ ಘೋಷಿಸಲು ವಿನಂತಿಸಿದ್ದಾರೆ.



