ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್ ಬಿಲ್ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಕೆಪಿಟಿಸಿಎಲ್ ಅಧಿಕಾರಿಗಳಿಗೆ ದೂರು ನೀಡಲಾಯಿತು.
ದಾವಣಗೆರೆಯಲ್ಲಿ ಮಾತ್ರವಲ್ಲ ರಾಜ್ಯವ್ಯಾಪಿ ಇದೇ ಸಮಸ್ಯೆಯಾಗಿದ್ದು ಎರಡರಿಂದ ಮೂರು ಪಟ್ಟು ಹೆಚ್ಚುವರಿ ಬಿಲ್ ಬಂದಿದೆ. ಸಾಫ್ಟ್ವೇರ್ ನಲ್ಲಿ ಸರಿಪಡಿಸುವ ಅವಶ್ಯಕತೆ ಇದೆ, ಆದ್ದರಿಂದ ಬೆಂಗಳೂರು ವಿಭಾಗ ಮಟ್ಟದ ಕಚೇರಿಗೆ ತಮ್ಮ ದೂರನ್ನು ತಲುಪಿಸುವುದಾಗಿ ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದರು.
ಸಾರ್ವಜನಿಕರಿಗೆ ಪ್ರತಿ ತಿಂಗಳು ಬರುವ ಬಿಲ್ ಗಿಂತ ಎರಡು ಮೂರು ಪಟ್ಟು ಹೆಚ್ಚು ಬಿಲ್ ಬಂದಿರುವುದರಿಂದ, ಇಲಾಖೆ ಇದನ್ನು ಸರಿಪಡಿಸುವ ತನಕ ರಾಜ್ಯವ್ಯಾಪಿ ಗ್ರಾಹಕರು ಬಿಲ್ ಕಟ್ಟಬಾರದು ಎಂದು ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಕೆಪಿಸಿಸಿಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾಪುರ, ಪಕ್ಷದ ಮುಖಂಡರಾದ ವಿನಯ್ ಜೋಗಪ್ಪ ನವರ್, ದ್ರಾಕ್ಷಾಯಣಮ್ಮ, ಯುವರಾಜ್, ಎಚ್. ಹರೀಶ್, ಕರಿಬಸಪ್ಪ ಮುಂತಾದವರು ಉಪಸ್ಥಿತರಿದ್ದರು.



