ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಏ. 29 ರಂದು ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇದೀಗ ಮತ್ತೆ 6 ಕೊರೊನಾ ಪಾಸಿಟವ್ ಪ್ರಕರಣಗಳು ಪಗತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಮಂಹಾತೇಶ್ ಬೀಳಗಿ ತಿಳಿಸಿದ್ದಾರೆ.
ಭಾಷಾನಗರ ನರ್ಸ್ 16 ವರ್ಷದ ಪುತ್ರನಿಗೆ ಪಾಸಿಟಿವ್ ಬಂದಿದ್ದು, ಜಾಲಿನಗರ ವೃದ್ಧನ ಸಂಪರ್ಕದಲ್ಲಿದ್ದ 5 ಜನರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇಲ್ಲಿ ಒಂದೇ ಕುಟುಂಬದ 5 ಜನರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಲ್ಲಿ ಒಂದು ವರ್ಷದ ಮಗುವಿಗೂ ಕೂಡ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ದಾವಣಗೆರೆ ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.

ದಾವಣಗೆರೆ ಏ. 29ರಕ್ಕಿಂತ ಮುನ್ನ ಗ್ರೀನ್ ಜೋನ್ ನಲ್ಲಿತ್ತು. ಕಳೆದ 30 ದಿನದಿಂದ ಯಾವುದೇ ಪ್ರಕರಣ ಪತ್ತೆಯಾಗದ ಹಿನ್ನೆಲೆ ಗ್ರೀನ್ ಜೋನ್ ಗೆ ಸೇರಿಸಲಾಗಿತ್ತು. ಗ್ರೀನ್ ಜೋನ್ ಗೆ ಬಂದ ಮರು ದಿನವೇ ದಾವಣಗೆರೆಯಲ್ಲಿ 30 ದಿನ ನಂತರ ಭಾಷಾನಗರ ನರ್ಸ್ ಕೊರೊನಾ ಪಾಸಿಟ್ ಪತ್ತೆಯಾಗಿತ್ತು. ಇದಾದ ನಂತರ ಜಾಲಿನಗರ ವೃದ್ಧನನಿಗೆ ಪಾಸಿಟಿವ್ ಪತ್ತೆಯಾಗಿತ್ತು.
ಈ ಇಬ್ಬರ ಟ್ರಾವಲ್ ಹಿಸ್ಟರಿ ಪತ್ತೆ ಕಾರ್ಯ ಪ್ರಗತಿಯಲ್ಲಿ ಇರುವಾಗಲೇ, ಈ ಇಬ್ಬರು ಸಂಪರ್ಕದಲ್ಲಿದ್ದವರನ್ನು ಪರೀಕ್ಷೆ ಮಾಡಿದಾಗ ಹೊಸದಾಗಿ 6 ಕೇಸ್ ಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಮತ್ತೊಷ್ಟು ಆತಂಕ ಮನೆ ಮಾಡಿದೆ.



