ಒಂದು ಹೆಣ್ಣು ತನ್ನ ತವರು ಮನೆಯಲ್ಲಿ ತಿಂದು ಉಂಡು ಸಂತೋಷವಾಗಿ ಬೆಳೆದಿರುತ್ತಾಳೆ. ಅದೇ ಹೆಣ್ಣು ತನ್ನ ತಂದೆ-ತಾಯಿ, ಅಣ್ಣ-ತಮ್ಮ ,ಅಕ್ಕ-ತಂಗಿ, ಎಲ್ಲರಿಗೂ ಮುದ್ದಿನ ಮಗುವಾಗಿ ಬೆಳೆದಿರುತ್ತಾಳೆ . ಅದೇ ಹೆಣ್ಣು ಮದುವೆ ವಯಸ್ಸಿಗೆ ಬಂದಿದ್ದು ಮದುವೆ ಮಾಡಿಕೊಂಡು ಗಂಡನ ಮನೆಗೆ ಕಳಿಸುತ್ತಾರೆ. ಗಂಡನ ಮನೆಯಲ್ಲಿ ಎಲ್ಲರ ಪ್ರೀತಿಯ ಪ್ರೇಮಕ್ಕಿಂತ ಗಂಡನ ಪ್ರೀತಿ ಪ್ರೇಮ ಸುಖ ನೆಮ್ಮದಿ ಬಹಳ ಪ್ರಮುಖವಾದದ್ದು.
ಜಾತಕವನ್ನು ನೋಡದೆ ಆಗಿರುವ ಮದುವೆ ಕಾರ್ಯ ಅಥವಾ ಪರಸ್ಪರ ಪ್ರೀತಿಸಿ ಆದ ಮದುವೆ ಕಾರ್ಯದಲ್ಲಿ ಗಂಡ-ಹೆಂಡತಿ ಮಧ್ಯೆ ನಿರಂತರವಾಗಿ ಜಗಳ, ಕಿರಿಕಿರಿ ,ಮನಸ್ತಾಪ, ಅನುಮಾನ ಎದುರಿಸುವ ಪ್ರಸಂಗ ಬರುತ್ತದೆ .
ವಧು ವರರ ಸಾಲಾವಳಿ ಪರೀಕ್ಷಿಸುವಾಗ ಗಣ ಕೂಟ, ರಾಶಿ ಕೂಟ ,ನಾಡಿ ಇತ್ಯಾದಿ ತಾಳಿ ಆದರೆ ಸಾಕು, ಎಂದು ಜ್ಯೋತಿಷ್ಯಗಳು ವಿವಾಹ ನಿಶ್ಚಯಿಸಲು ಅನುಮತಿ ಕೊಡುತ್ತಾರೆ.
ಜನ್ಮಂಗ ಲಗ್ನ ಕುಂಡಲಿ ಆಗಲಿ ನವಾಂಶ ಕುಂಡಲಿ ಆಗಲಿ ವಧು-ವರರ ಜಾತಕದಲ್ಲಿನ ದೋಷಗಳನ್ನು ಪರೀಕ್ಷಿಸುವುದಿಲ್ಲ. ಈ ರೀತಿಯಾದ ಮದುವೆ ಒಂದಿಲ್ಲೊಂದು ಕಷ್ಟಗಳನ್ನು ಎದುರಿಸುವ ಪ್ರಸಂಗ ಬರುತ್ತದೆ.
ವಧುವರರ ಜನ್ಮ ಕುಂಡಲಿಯಲ್ಲಿ ಮದುವೆ ವಿಚಾರ ಪರೀಕ್ಷಿಸುವ ಕುರಿತು.
ಲಗ್ನದಿಂದ ಸಪ್ತಮ ಸ್ಥಾನ ಬಹಳ ಮುಖ್ಯ ಅದುವೇ ಕಳತ್ರಸ್ಥಾನ( ಮದುವೆ ಸ್ಥಾನ)
ನಂತರ ಇಬ್ಬರ ಜನ್ಮ ಕುಂಡಲಿಯಲ್ಲಿ ಪಂಚಮ ಸ್ಥಾನವನ್ನು ಅದುವೇ ಸಂತಾನ ಸ್ಥಾನ.
ನಂತರ ಹೆಣ್ಣಿಗೆ ಲಗ್ನದಿಂದ ಅಷ್ಟಮ ಸ್ಥಾನ ಅದುವೇ ಆಯುಷ್ಯ ಸ್ಥಾನ ,ಕೂಡ ಬಹಳ ಪ್ರಮುಖವಾದದ್ದು ನಂತರ ನವಂಶ ಕುಂಡಲಿ ಕೂಡ ಪರೀಕ್ಷಿಸಬೇಕು.
ಒಟ್ಟಾರೆ ಪರೀಕ್ಷಿಸಿ ಯೋಗ್ಯವಾದರೆ ಮದುವೆಗೆ ಸೂಕ್ತ ನಿರ್ದೇಶನ ನೀಡಬೇಕು.
-ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403



