ಡಿವಿಜಿಸುದ್ದಿ.ಕಾಂ, ದಾವಣಗೆರೆ: ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಎಸ್.ಎನ್ ಫೀಡರ್ ಹಾಗು ಸರಸ್ವತಿ ಫೀಡರ್‌ಗಳಲ್ಲಿ ತುರ್ತು ಕಾರ್ಯ ಹಮ್ಮಿಕೊಂಡಿರುವುದರಿಂದ ಸೆ. 17 ರಂದು ನಗರ ಕೆಲ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಸರಸ್ವತಿ ಫೀಡರ್ ವ್ಯಾಪ್ತಿಯ ಭೂಮಿಕ ನಗರ, ಎಸ್.ಎಸ್. ಲೇಔಟ್, ಶೇಕರಪ್ಪ ಗೋಡೋನ್ ಹಾಗೂ ಬೆಳಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಎಸ್.ಎನ್. ಫೀಡರ್ ವ್ಯಾಪ್ತಿಯ ನಿಜಲಿಂಗಪ್ಪ ಬಡಾವಣೆ ಎ ಮತ್ತು ಬಿ ಬ್ಲಾಕ್, ಯಲ್ಲಮ್ಮ ನಗರ, ಬಂಟ್ಸ್ ಸಮುದಾಯ ಭವನ ಸುತ್ತ ಮುತ್ತ, ಬಸವೇಶ್ವರ ಲೇಔಟ್, ಶಾಂತಿನಗರ, ವಿನೋಬನಗರ, ೩ ಮತ್ತು ೪ನೇ ಮೇನ್, ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.



