ಡಿವಿಜಿ ಸುದ್ದಿ, ದಾವಣಗೆರೆ: ಜಮೀರ್ ಒಬ್ಬ ಅರೆ ಹುಚ್ಚ,ಮತಾಂಧ. ಪ್ರತಿ ಸಲ ದೇಶ ದ್ರೋಹ ಕೇಳಿಕೆ ನೀಡುವ ಜಮೀರ್ ಖಾನ್ ಗೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಬೇಕಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದರು.
ನ್ಯಾಮತಿಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ನಂತರ ಮಾತನಾಡಿದ ಅವರು, ಪಾದರಾಯನಪುರ ಘಟನೆಯಲ್ಲಿ ಜಮೀರ್ ಖಾನ್ ನೇರವಾಗಿ ಭಾಗಿಯಾಗಿದ್ದಾರೆ. ಇಂಥವರನ್ನು ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಬೇಕು. ಇನ್ನು ಅವರನ್ನು ಸಮರ್ಥಿಸಿಕೊಳ್ಳುವ ಮಾಜಿ ಸಚಿವ ಯು.ಟಿ. ಖಾದರ್ ಕೂಡ ಮತಾಂಧ ಎಂದರು.
ಪ್ರತಿ ಸಲ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಜಮೀರ್ ಖಾನ್, ಸಮಾಜದಲ್ಲಿ ಅಶಾಂತಿ ಸೃಷ್ಠಿ ಮಾಡುತ್ತಿದ್ದಾರೆ. ಇಂತಹ ದೇಶದ್ರೋಹ ಹೇಳಿಕೆ ನೀಡುವವರಿಗೆ ಗುಂಟೇಟಿನಿಂದ ಮಾತ್ರ ದಾರಿಗೆ ಬರಲು ಸಾಧ್ಯ. ದೇಶದಲ್ಲಿ ಯಾರೇ ದೇಶ ದ್ರೋಹ ಹೇಳಿಕೆ ನೀಡಿದರೂ, ಅವರಿಗೆ ಗುಂಡೇಟು ಸದ್ದು ಕೇಳಿಸಬೇಕಿದೆ. ಈ ಮೂಲಕ ದೇಶದ್ರೋಹಿಗಳನ್ನು ಹತ್ತಿಕ್ಕಲು ಸಾಧ್ಯ ಎಚ್ಚರಿಕೆ ನೀಡಿದರು.
ದೇಶದಲ್ಲಿ ಕೋವಿಡ್-19 ನಿಂದ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನರ್ಸ್ ಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಸ್ಪಂದಿಸದೇ, ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ ವರ್ತನೆ ಸರಿಯಲ್ಲ ಎಂದರು.