ಡಿವಿಜಿ ಸುದ್ದಿ, ದಾವಣಗೆರೆ: ರೈತರಿಗೆ ಹೊಸ ಬೆಳೆ ಸಾಲ ನೀಡಲು ಸರ್ಕಾರ ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದ ಎಂಪಿಎಂಸಿ ಮಾರುಕಟ್ಟೆ ಹಾಗೂ ಡಿಸಿಸಿ ಬ್ಯಾಂಕ್ ಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಕೊರೊನಾ ಭೀತಿ ಹಿನ್ನೆಲೆ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಬೆಳೆ ಮಾರಾಟಕ್ಕೆ ತೊಂದರೆ ಆಗಬಾರದು.
ಈಗಾಗಲೇ ರೈತರ ಸಾಲ ಮನ್ನಾ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳಲಾಗಿದೆ. ರಾಜ್ಯದಲ್ಲಿ 29,800 ಅರ್ಜಿಗಳಿದ್ದವು. ಇದರಲ್ಲಿ14629 ಅರ್ಜಿಗಳು ಇನ್ನು ವಿಲೇವಾರಿ ಆಗಿಲ್ಲ. ಈ ಬಗ್ಗೆ ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ. ಇನ್ನೆರಡು ದಿನಗಳಿಗೆ ರೈತರಿಗೆ ಹೊಸ ಸಾಲ ನೀಡುವ ಬಗ್ಗೆ ಅದೇಶ ಹೊರಡಿಸಲಾಗುವುದು.
ವಾಹನ ಸೀಜ್ ಮಾಡುವಂತಿಲ್ಲ
ಖಾಸಗಿ ಹಣಕಾಸು ಕಂಪನಿಗಳು ರೈತರ ಸಾಲ ವಸೂಲು ಮಾಡುವಂತಿಲ್ಲ. ವಾಹನಗಳನ್ನ ಸೀಜ್ ಮಾಡುವಂತಿಲ್ಲ. ಹಣಕಾಸು ಕಂಪನಿಗಳಿಗೆ ಮುಖ್ಯಮಂತ್ರಿ ಗಳ ಜೊತೆ ಮಾತುಕತೆ ನಡೆಸಿ ಸುತ್ತೋಲೆ ಹೊರಡಿಸಲಾಗುವುದು. ಮೂರು ತಿಂಗಳಕಾಲ ಸಾಲ ವಸೂಲಿ ಮಾಡದಂತೆ ಖಾಸಗಿ ಕಂಪನಿಗಳಿಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.



