ಡಿವಿಜಿ ಸುದ್ದಿ, ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಕೊರೊನಾ ವೈರಸ್ ಗೆ ತತ್ತರಿಸಿ ಹೋಗಿದೆ. ಇಂದು ಒಂದೇ ದಿನದ 10 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.
ನಂಜನಗೂಡಿನ ಔಷಧ ಕಾರ್ಖಾನೆಯ 9 ನೌಕರರು ಸೇರಿದಂತೆ, ಮೈಸೂರಿನ ವೃದ್ಧರೊಬ್ಬರಿಗೆ ಕೋವಿಡ್-19 ದೃಢಪಟ್ಟಿದೆ. ಔಷಧ ಕಾರ್ಖಾನೆಯ ನೌಕರರು ಕ್ವಾರಂಟೈನ್‌ನಲ್ಲಿದ್ದವರು. ಇದೀಗ ಸೋಂಕು ದೃಢಪಟ್ಟದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.
ಮೈಸೂರಿನ ವೃದ್ಧರು ಆರಂಭದಲ್ಲಿ ನಾಲ್ಕು ದಿನ ನಗರದ ಮಹದೇಶ್ವರ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ನಂತರ ಜೆಎಸ್‌ಎಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದೀಗ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿದ್ದಾರೆ. ಯಾರಿಂದ ಸೋಂಕು ತಗುಲಿದೆ ಎಂಬುದು ತಿಳಿದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಕೋವಿಡ್ ದೃಢಪಟ್ಟ 58 ಜನರಲ್ಲಿ ಈಗಾಗಲೇ 12 ಜನರು ಗುಣಮುಖರಾಗಿದ್ದಾರೆ. 46 ಜನರು ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.



