ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಮೇ 3 ವರೆಗೆ ಲಾಕ್ ಡೌನ್ ಮುಂದುವರಿಸಿದ್ದಾರೆ. ಈ ವೇಳೆ ಕೊರೊನಾ ನಿಯಂತ್ರಣಕ್ಕೆ ಮೋದಿ ಅವರು ಸಪ್ತ ಸೂತ್ರಗಳನ್ನು ಸೂಚಿಸಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದಾದ್ಯಂತ ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯವಾಗಿದೆ. ಲಾಕ್‍ಡೌನ್ ಪಾಲನೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತ್ತಷ್ಟು ನಿಯಂತ್ರಿಸಲು ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸುತ್ತಿದ್ದೇನೆ ಎಂದರು.
India to remain in lockdown till May 3, announces PM Modi
Read @ANI Story | https://t.co/TpyrKLv1l5 pic.twitter.com/GDAPI3eZxU
— ANI Digital (@ani_digital) April 14, 2020
ಮೋದಿಯ ಏಳು ಸೂತ್ರಗಳು:
1. ಮನೆಯಲ್ಲಿರುವ ವೃದ್ಧರ ಬಗ್ಗೆ ಕಾಳಜಿ ವಹಿಸಿ.
2 ರೋಗ ಇದ್ದವರಿಗೆ ಜಾಗೃತಿ ವಹಿಸಿ, ಅವರನ್ನು ಕೊರೊನಾದಿಂದ ರಕ್ಷಿಸಿ.
3. ಸಾಮಾಜಿಕ ಅಂತರ ಮತ್ತು ಲಾಕ್‍ಡೌನ್ ನಿಮಯ ಪಾಲಿಸಿ, ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಬಳಸಿ.
4. ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಿ.
5. ಆರೋಗ್ಯ ಸೇತು ಆಪ್ ಡೌನ್‍ಲೌಡ್ ಮಾಡಿಕೊಂಡು ಇತರಿಗೆ ಪ್ರೇರೇಪಿಸಿ.
6. ಬಡ ಕುಟುಂಬಗಳಿಗ ನೆರವು ನೀಡಿ
7. ಕೆಲಸದಿಂದ ಯಾರನ್ನು ತೆಗೆಯಬೇಡಿ
ಈ ರೀತಿ ಮೋದಿ ಕೊರೊನಾ ವಿರುದ್ಧ ಹೋರಾಟಕ್ಕೆ ಏಳು ಸೂತ್ರಗಳನ್ನು ಜನತೆಗೆ ಸೂಚಿಸಿದ್ದಾರೆ. ಅಲ್ಲದೇ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಜನರನ್ನ ಗೌರವಿಸಬೇಕು ಎಂದು ಕೂಡ ಸೂಚಿಸಿದ್ದಾರೆ.