ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವರಿಗೆ ಕಳೆದ ಒಂದು ವಾರದಿಂದ ನಗರ ವಿವಿಧ ಬಡಾವಣಗೆಯಲ್ಲಿ ಆಹಾರದ ಕಿಟ್ ವಿತರಿಸುತ್ತಿರುವ ಬೆಳ್ಳಿ, ಬಂಗಾರ ವರ್ತಕರಾದ ನಲ್ಲೂರು ಸಹೋದರರ ಸೇವೆ ಶ್ಲಾಘನೀಯ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಅಭಿಪ್ರಾಯಪಟ್ಟರು.

ನಗರದ ಎಸ್ ಜೆಎಂ ನಗರದಲ್ಲಿ ಬಡ ಜನರಿಗೆ ನಲ್ಲೂರು ಸಹೋದರರಾದ ಎಸ್. ರಾಜಕುಮಾರ್ ಹಾಗೂ ಎಸ್ ರಾಘವೇಂದ್ರ ಅವರು ನೀಡಿದ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ಕೊರೊನಾ ವೈರಸ್ ಪರಿಣಾಮ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರಿಗೆ ತುಂಬಾ ತೊಂದರೆ ಆಗಿದೆ. ಇದನ್ನು ಮನಗಂಡ ಖ್ಯಾತ ಬೆಳ್ಳಿ, ಬಂಗಾರ ವರ್ತಕರಾದ ನಲ್ಲೂರು ಸಹೋದರರು ಬಡವರಿಗೆ ಆಹಾರ ಕಿಟ್ ನೀಡುತ್ತಿದ್ದಾರೆ. ಇವರ ಸೇವೆ ದೇವರು ಮೆಚ್ಚುವಂತಹದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಲ್ಲಾವಲಿ ಗಾಜಿಖಾನ್, ಆರ್. ಅಬ್ದುಲ್, ಇನ್ ಟ್ಯಾಕ್ ಜಿಲ್ಲಾಧ್ಯಕ್ಷ ಕೆ.ಎಂ. ಮಂಜುನಾಥ್, ಕೊಂಡಜ್ಜಿ ಮಲ್ಲಿಕಾರ್ಜುನ್, ಡಿ.ಶಿವಕುಮಾರ್, ಶ್ರೀನಿವಾಸ್ ವಿ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಕೆ.ಎಲ್. ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿಗಾಗಿ ವಾಟ್ಸಾಪ್ : 7483892205
ಇಮೇಲ್: dvgsuddi@gmail.com



