ಮುಂಬೈ: ಚಪ್ಪಾಳೆ ಹೊಡೆದು, ದೀಪ ಬೆಳಗಿಸುವುದರಿಂದ ಕೊರೊನಾ ವೈರಸ್ ಯುದ್ದ ಗೆಲ್ಲಲು ಸಾಧ್ಯವಿಲ್ಲ ಎಂದು ಶಿವಸೇನಾ ಹೇಳಿದೆ.
ಶಿವಸೇನಾ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮನವಿಯನ್ನು ಜನರು ತಪ್ಪಾಗಿ ಗ್ರಹಿಸಿದ್ದಾರೆ.
ಮೋದಿಯವರು ಜನರಿಂದ ಏನು ಬಯಸಿದ್ದರು ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಿತ್ತು. ಪ್ರಧಾನಿ ಕರೆಗೆ ಜನರು ತಮ್ಮ ಮನೆಗಳಲ್ಲಿ ಮೇಣದಬತ್ತಿಗಳು ಮತ್ತು ದೀಪಗಳನ್ನು ಬೆಳಗಿಸಿದ್ದರು. ಕೇವಲ ತಟ್ಟೆ, ಚಪ್ಪಾಳೆ ಮತ್ತು ದೀಪಗಳಿಂದ ಕೊರೊನಾ ವಿರುದ್ಧದ ಯುದ್ದವನ್ನು ಗೆಲ್ಲಲು ಸಾಧ್ಯವಿಲ್ಲ.
ಪ್ರಧಾನಿಯವರ ಕರೆಯನ್ನು ಜನರು ತಪ್ಪಾಗಿ ಅರ್ಥ ಮಾಡಿಕೊಂಡಿರಬಹುದು, ಅಥವಾ, ಇಂತಹ ಹಬ್ಬದ ವಾತಾವರಣ ಪ್ರಧಾನಿಯವರಿಗೆ ಬೇಕಾಗಿರಬಹುದು ಪ್ರಶ್ನಿಸಿದೆ.



