ಡಿವಿಜಿ ಸುದ್ದಿ, ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ನಿವಾರಣೆಗೆ ದೀಪ ಬೆಳಗಿಸಿ ಎಂದು ಕರೆ ನೀಡಿದ್ದಾರೆ. ಆದರೆ, ಮೇಣದ ಬತ್ತಿ ತರಲು ಹೊರಗೆ ಹೋದರೆ ಲಾಠಿ ಚಾಚ್೯ ಮಾಡುತ್ತಾರೆ ಎಂದಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ದಾವಣಗೆರೆ ಬಿಜೆಪಿ ಯುವ ಘಟಕದಿಂದ ಮೇಣದ ಬತ್ತಿಯನ್ನು ಸ್ಪೀಡ್ ಪೋಸ್ಟ್ ಮಾಡಿದ್ದಾರೆ.
.
ಭಾರತೀಯ ಪರಂಪರೆಯಲ್ಲಿ ದೀಪಕ್ಕೆ ವಿಶೇಷ ಸ್ಥಾನಮಾನವಿದೆ. ದೀಪದಿಂದ ಅಂಧಕಾರ ತೊಡಗಿ ಬೆಳಕು ಪ್ರಜ್ವಲಿಸಲಿದೆ. ಆದರೆ, ನಿಮ್ಮ ಅಸಾಹಯಕತೆಯನ್ನು ಮನಗಂಡು ನಾವು ನಿಮ್ಮ ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪ್ಯಾಕೆಟ್ ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ. ನೀವು ಕುಟುಂಬ ಸಮೇತರಾಗಿ ನಿರ್ಮಲ ಮತ್ತು ನಿಶ್ಚಲ ಮನಸ್ಸಿನಿಂದ ದೇಶಕ್ಕೆ ಬಂದ ಕೊರೊನಾ ಕಂಟಕ ಹೊಡೆದೊಡಿಸಲು ದೀಪ ಬೆಳಗಿಸಿ ಎಂದು ಮನವಿ ಮಾಡಿದ್ದಾರೆ.
ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್,
ಆನಂದ್ ರಾವ್ ಸಿಂಧೆ, ಶ್ರೀ ಕಾಂತ್ ನಿಲಗುಂದ ಟಿಂಕರ್ ಮಂಜಣ್ಣ, ಅಭಿಷೇಕ ಪಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.