ಡಿವಿಜಿ ಸುದ್ದಿ, ಹರಪನಹಳ್ಳಿ : ತಾಲ್ಲೂಕಿನ ಚಟ್ನಿಹಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳ ಹಾಗೂ ರಾಗಿ ಹುಲ್ಲಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. 15 ಎಕ್ಕರೆಯಲ್ಲಿ ಬೆಳೆದ ಮೆಕ್ಕೆಜೋಳ ಹಾಗೂ ದನಕರುಗಳಿಗೆ ಸಂಗ್ರಹಿಸಿದ್ದ ರಾಗಿ ಹುಲ್ಲು ನಾಶವಾಗಿದೆ.
ಗ್ರಾಮದ ರೈತರಾದ ಐಗುರೂ ಉಮಾಪತಿ, ಶಿವಮೂರ್ತಪ್ಪ ಅವರಿಗೆ ಸೇರಿದ ಕಣದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕೊರೊನದಿಂದ ಮೆಕ್ಕೆಜೋಳ ಬೆಲೆ ಕಡಿಮೆಯಾಗಿದ್ದಕ್ಕೆ ಮಾರಾಟ ಮಾಡದೆ ಕಣದಲ್ಲಿ ಸಂಗ್ರಹಿಸಿಡಲಾಗಿತ್ತು.