ಡಿವಿಜಿಸುದ್ದಿ.ಕಾಂ, ದಾವಣಗೆರೆ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಮತ್ತು ಆದರ್ಶ ಸಮಾಜ ಕಾರ್ಯ ಸಂಸ್ಥೆ ಸಹಯೋಗದೊಂದಿಗೆ ಸೆ.೨೨ ರಂದು ನಗರದ ಬಾಪೂಜಿ ಪ್ರೌಢಶಾಲೆ ಆವರಣ ವಿಶ್ವ ಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆ ಆಯೋಜಿಸಿದೆ.
ಪುರುಷರಿಗೆ ಕ್ರೀಡಾ ಸ್ಪರ್ಧೆಗಳು
60-70 ವಯೋಮಾನದವರಿಗೆ 100 ಮೀ. ಓಟ, 3 ಕೆ.ಜಿ. ಗುಂಡು ಎಸೆತ
71-80 ವಯೋಮಾದವರಿಗೆ 75 ಮೀ. ಓಟ, 3 ಕೆ.ಜಿ. ಗುಂಡುಎಸೆತ
80 ವರ್ಷ ಮೇಲ್ಪಟ್ಟವರಗೆ 200 ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ
ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳು
60-70 ವಯೋಮಾನದವರಿಗೆ 400 ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ,
71-80 ವಯೋಮಾನದವರಿಗೆ 200 ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ
80 ವಯೋಮಾನದ ಮೇಲ್ಪಟ್ಟು – 100 ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ
ಪುರುಷರಿಗೆ ಮತ್ತು ಮಹಿಳೆಯರಿಗೆ ಏಕಪಾತ್ರಾಭಿನಯ, ಜಾನಪದ ಗೀತೆ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತ ಹೊಂದಿರುವ ಹಿರಿಯ ನಾಗರಿಕರು ಸೆ.20 ರಂದು ಸಂಜೆ 5.30 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ: 08 192 263939, 9844143827, 9738174083, 08192-236784, 2896001, 9148672498 ಸಂಪರ್ಕಿಸಿ .
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 98444603336, 7483892205



