ಡಿವಿಜಿ ಸುದ್ದಿ, ದಾವಣಗೆರೆ: ಸಾರ್ವಜನಿಕರು ನಲ್ಲಿಗಳಿಗೆ ನೇರವಾಗಿ ಮೋಟಾರ್ ಅಳವಡಿಸುವುದು ಹಾಗೂ ರಸ್ತೆಗೆ ನೀರು ಹರಿಸುತ್ತಿರುವುದು ಕಂಡು ಬಂದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ನಗರಕ್ಕೆ ಪ್ರತಿದಿನ 2ನೇ ಹಂತದ ನೀರು ಸರಬರಾಜು ಕೇಂದ್ರದಿಂದ 40 ಎಂ.ಎಲ್.ಡಿ. ಹಾಗೂ ಟಿ.ವಿ. ಸ್ಟೇಷನ್ ಪಂಪ್‍ಹೌಸ್‍ನಿಂದ 18 ಎಂ.ಎಲ್.ಡಿ. ಪ್ರತಿದಿನ 5 ಕೋಟಿ 80 ಲಕ್ಷ ಲೀಟರ್ ನೀರನ್ನು ಸರಬರಾಜು ಮಾಡುತ್ತಿದ್ದರೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದಕ್ಕೆ ಕಾರಣ ಪರಿಶೀಲಿಸಿದಾಗ ಸಾರ್ವಜನಿಕರು ನೀರು ವಿತರಣಾ ಪೈಪಿಗೆ ಮೋಟಾರ್ ಅಳವಡಿಸುತ್ತಿರುವುದು ಹಾಗೂ ನೀರನ್ನು ರಸ್ತೆಗೆ ಪೋಲು ಮಾಡುತ್ತಿರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ಪರಿಶೀಲನೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ನೀರನ್ನು ರಸ್ತೆಗೆ ಪೋಲು ಮಾಡುವವರ ಮೋಟಾರನ್ನು ಜಪ್ತು ಮಾಡಲಾಗುವುದು ಮತ್ತು ಸ್ಥಳದಲ್ಲೇ ದಂಡ ವಿಧಿಸಲಾಗುವುದ. ಮನೆಯ ನಳ ಜೋಡಣೆಯನ್ನು ಬಂದ್ ಮಾಡಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ತಿಳಿಸಿದ್ದಾರೆ.