ಚೆನ್ನೈ: ತಮಿಳುನಾಡು ರಾಜಕೀಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದು, ಇಂದು ಚೆನ್ನೈನಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿ ಪ್ರಾಮಾಣಿಕ, ಯುವ ಸಮುದಾಯ ಒಳಗೊಂಡ ಸುಜನಶೀಲ ಪಕ್ಷ ಅಗತ್ಯವಾಗಿದೆ ಎಂದರು.
ತಮಿಳುನಾಡಿನ ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ನನಗೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ. ಬದಲಾವಣೆ ಆಗುವುದನ್ನಷ್ಟೇ ನಾನು ಬಯಸುತ್ತೇನೆ. ಬಿಸಿನೆಸ್ ಆಗಿರೋ ಪ್ರಸ್ತುತ ರಾಜಕೀಯ ಬದಲಾಗಬೇಕಿದೆ. ಏಕ ನಾಯಕ ರಾಜಕೀಯ ಬದಲಾಗಬೇಕು ಎಂದರು.
Rajinikanth in Chennai: I have never thought of the Chief Minister's post. I only want a change in politics. https://t.co/Eh7rxp7VDn pic.twitter.com/bukPd4Pvk2
— ANI (@ANI) March 12, 2020
ಪಕ್ಷದ ಅಧ್ಯಕ್ಷರು ಸರ್ಕಾರದಲ್ಲಿ ಮೂಗು ತೂರಿಸಬಾರದು. ಹೊಸ ಪಕ್ಷ ಕಟ್ಟಿ ಹೊಸಬರು, ಯುವಕರಿಗೆ ಪಕ್ಷದಲ್ಲಿ ಆದ್ಯತೆ ಕೊಡುತ್ತೇನೆ. ನಿಷ್ಠಾವಂತರಿಗೆ ಪಕ್ಷದಲ್ಲಿ ಆದ್ಯತೆ ನೀಡಲಾಗುತ್ತೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಟಿಕೆಟ್ ಕೊಡುತ್ತೇನೆ ಎಂದು ರಜನಿಕಾಂತ್ ತಿಳಿಸಿದರು.
Rajinikanth in Chennai: If change in politics and government does not happen now, it will never happen. pic.twitter.com/laqTg0wTbO
— ANI (@ANI) March 12, 2020
ರಾಜ್ಯದ ಮುಖ್ಯಮಂತ್ರಿಯಾಗಿ ಸುಶಿಕ್ಷಿತ ಮತ್ತು ಸಹಾನುಭೂತಿಯುಳ್ಳ ಯುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕನಸ ಹೊಂದಿದ್ದೇನೆ ಎಂದರು. ಇತ್ತೀಚೆಗೆ ರಜನಿ ಮಕ್ಕಳ್ ಮಂದ್ರಮ್ (ಆರ್‌ಎಂಎಂ) ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ್ದ ರಜನೀಕಾಂತ್, ಮಹತ್ವದ ನಿರ್ಧಾರ ತಿಳಿಸವುದಾಗಿ ಹೇಳಿದ್ದರು.2021ರ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದ್ದು, ಪಕ್ಷಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದರು.



