ದಾವಣಗೆರೆ: ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟ ಇವರ ವತಿಯಿಂದ ಫೆಬ್ರವರಿ-2026ರ ಮಾಹೆಯಲ್ಲಿ ಉಚಿತವಾಗಿ ಆಡು ಮತ್ತು ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಹಣ್ಣು ಬೆಳೆಗಳ ಕೃಷಿ, ಸಾವಯವ ಕೃಷಿ, ಸಮಗ್ರ ಕೃಷಿ, ಅಣಬೆ ಕೃಷಿ, ಜೇನು ಕೃಷಿ, ರೇಷ್ಮೆ ಕೃಷಿ ಮತ್ತು ಪುಷ್ಪ-ತರಕಾರಿ ಬೆಳೆಗಳ ಕೃಷಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ 18 ರಿಂದ 55 ವರ್ಷದೊಳಗಿನ ಸ್ವಸಹಾಯ ಸಂಘದ ಸದಸ್ಯರು, ಯುವಕರು, ಮಹಿಳೆಯರು ಭಾಗವಹಿಸಬಹುದು.
ದಾವಣಗೆರೆ: ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸಾವಿಗೆ ಕಾರಣವಾಗಿದ್ದ ಚಾಲಕ 32 ವರ್ಷ ನಂತರ ಬಂಧನ
ತರಬೇತಿಯು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಯುನಿಟ್-2, ಸೆಕ್ಟರ್ ನಂ-96, ಅಡ್ಡರಸ್ತೆ 3, ಪಬ್ಲಿಕ್ ಗಾರ್ಡನ್ ಹತ್ತಿರ, ದುರ್ಗಾನಗರ, ನವನಗರ-ಬಾಗಲಕೋಟೆ -587103 ಮೊ.ಸಂ: 9482630790 ಇಲ್ಲಿಗೆ ಕರೆ ಮಾಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದೆಂದು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.



