ಬೆಂಗಳೂರು: ರಾಜ್ಯದ ಹಿಂದುಳಿದ ಮತ್ತು ದಲಿತ ಸಮುದಾಯದ 22 ಮಠಗಳಿಗೆ ಭೂಮಿ ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಯಾವ ಮಠಗಳಿಗೆ ಎಷ್ಟು ಜಮೀನು ಮಂಜೂರು?
1. ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀಕ್ಷೇತ್ರ ಕಾಗಿನೆಲೆಗೆ ಬ್ಯಾಡಗಿ ತಾಲೂಕು ಹಾವೇರಿ ಮಠಕ್ಕೆ ಸರ್ವೇ ನಂ- 58 ರಲ್ಲಿ 1 ಎಕರೆ
2. ಶ್ರೀ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠ(ರಿ) ಹೊಸದುರ್ಗ, ಶ್ರೀಕ್ಷೇತ್ರ ಎಸ್ಎಸ್ಎಸ್ ನಗರ ಹೊಸದುರ್ಗ ಮಠಕ್ಕೆ ಸರ್ವೇ ನಂ- 58 ರಲ್ಲಿ 1 ಎಕರೆ ಜಮೀನು
3. ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠ ಶ್ರೀ ಇಮ್ಮಡಿಗಿರಿನಗರ ಮಠಕ್ಕೆ ಸರ್ವೇ ನಂ- 58 ರಲ್ಲಿ 1 ಎಕರೆ ಜಮೀನು
4. ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಟ್ರಸ್ಟ್ ಎಂಕೆ ಹಟ್ಟಿ ಮಠಕ್ಕೆ ಸರ್ವೇ ನಂ- 57 ರಲ್ಲಿ 1 ಎಕರೆ ಜಮೀನು
5. ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್, ರಾಜನಳ್ಳಿ ಹರಿಹರ ತಾಲೂಕಿನ ಮಠಕ್ಕೆ ಸರ್ವೇ ನಂ- 57 ರಲ್ಲಿ 1 ಎಕರೆ ಜಮೀನು
6. ಉಪವೀರ ಜಗದ್ಗುರು ವಿದ್ಯಾ ಸಂಸ್ಥೆ ಬ್ರಹ್ಮವೀರ ನಗರ, ಹೊಸದುರ್ಗ ಮಠಕ್ಕೆ ಸರ್ವೇ ನಂ- 57 ರಲ್ಲಿ 1 ಎಕರೆ ಜಮೀನು
7. ಗೊಲ್ಲಗಿರಿಯ ಅಖಿಲ ಭಾರತ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನ ಮಠಕ್ಕೆ ಸರ್ವೇ ನಂ- 57 ರಲ್ಲಿ 31 ಗುಂಟೆ ಜಮೀನು
8. ಬೆಂಗಳೂರು ಶೇಷಾದ್ರಿ ಪುರಂನ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿ ಗಳ ಸಂಘಕ್ಕೆ ಸರ್ವೇ ನಂ- 57 ರಲ್ಲಿ 1 ಎಕರೆ ಜಮೀನು
9. ಶ್ರೀ ನಾರಾಯಣ ಗುರು ಮಹಾಸಂಸ್ಥಾನ, ನಿಟ್ಟೂರು, ಹುಂಚದಕಟ್ಟೆ ಮಠಕ್ಕೆ ಸರ್ವೇ ನಂ- 57 ರಲ್ಲಿ 31.08 ಗುಂಟೆ ಜಮೀನು ಮಂಜೂರು10. ಮಾಚಿದೇವ ಜಗದ್ಗುರು ಮಹಾಸಂಸ್ಥಾನ ಮಠ (ಮಡಿವಾಳ ಗುರುಪೀಠ) ದಾವಣಗೆರೆ ರಸ್ತೆ, ಚಿತ್ರದುರ್ಗದ ಮಠಕ್ಕೆ ಸರ್ವೇ ನಂ- 57 ರಲ್ಲಿ 32 ಗುಂಟೆ ಜಮೀನು
11. ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ, ನರಸೀಪುರದ ಮಠಕ್ಕೆ ಸರ್ವೇ ನಂಬರ್ 57 ರಲ್ಲಿ 32 ಗುಂಟೆ ಜಮೀನು
12. ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠ ಟ್ರಸ್ಟ್ ಸುಕ್ಷೇತ್ರ ತಂಗಡಗಿ ಮುದ್ದೆಬಿಹಾಳ ಮಠಕ್ಕೆ ಸರ್ವೇ ನಂ-57 ರಲ್ಲಿ 31 ಗುಂಟೆ ಜಮೀನು
13. ಶ್ರೀ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠ (ರಿ) ತೆಲಸಂಗ, ಅಥಣಿ ಮಠಕ್ಕೆ ಸರ್ವೇ ನಂ- 57 ರಲ್ಲಿ 31 ಗುಂಟೆ ಜಮೀನು
14. ಶ್ರೀ ಸವಿತಾ ಪೀಠ ಚಾರಿಟೇಬಲ್ ಟ್ರಸ್ಟ್ (ರಿ) ಕೊಂಚೂರ ಗ್ರಾಮ ತಾ. ಚಿತ್ತಾಪುರ ಮಠಕ್ಕೆ ಸರ್ವೇ ನಂ- 57 ರಲ್ಲಿ 0-30 ಗುಂಟೆ ಜಮೀನು ಮಂಜೂರು15. ಹೇಮಾ ವೇಮಾ ಸದ್ಭಾವನ ಗುರುಪೀಠ ಹರಿಹರ ಮಠಕ್ಕೆ ಸರ್ವೇ ನಂ- 57 ರಲ್ಲಿ 0-23.12 ಗುಂಟೆ ಜಮೀನು
16. ನಿಕೇತನ ಎಜುಕೇಶನ್ ಟ್ರಸ್ಟ್ ಬೆಂಗಳೂರು ಸರ್ವೇ- 57 ರಲ್ಲಿ 01-00 ಎಕರೆ ಜಮೀನು
17. ಎಸ್.ವಿ.ಎಸ್. ಊರುಗೊಲು ವೃದ್ಧಾಶ್ರಮ ಚಾರಿಟೇಬಲ್ ಟ್ರಸ್ಟ್ (ರಿ) ತುಮಕೂರು ಗೆ ಸರ್ವೇ ನಂ- 57 ರಲ್ಲಿ 0-35.08 ಗುಂಟೆ ಜಮೀನು ಮಂಜೂರು18. ಹಿಂದುಳಿದ ದಲಿತ ಮಠಾಧೀಶ್ವರರ ಒಕ್ಕೂಟ ಆರ್.ಪಿ.ಸಿ. ಲೇಔಟ್, ಬೆಂಗಳೂರು ಮಠಕ್ಕೆ ಸರ್ವೇ 57 ರಲ್ಲಿ 0.35 ಗುಂಟೆ
19. ಬೆಂಗಳೂರಿನ ಕರ್ನಾಟಕ ರಾಜ್ಯ ಅಹಲ್ಯ ಬಾಯಿ ಹೋಲ್ಕರ್ ಮಹಿಳಾ ಸಂಘಕ್ಕೆ ಸರ್ವೇ 57 ರಲ್ಲಿ 1 ಎಕರೆ ಜಾಗ
20. ಚಿತ್ರದುರ್ಗದ ಚಲವಾದಿ ಗುರುಪೀಠಕ್ಕೆ ಸರ್ವೇ ನಂ-57 ರಲ್ಲಿ 0-32 ಗುಂಟೆ
21. ಚಿತ್ರದುರ್ಗದ ಅಖಿಲ ಕರ್ನಾಟಕ ಶ್ರೀಗುರು ಮೇದರ ಕೇತೇಶ್ವರ ಟ್ರಸ್ಟ್ಗೆ ಸರ್ವೇ ನಂ- 57 ರಲ್ಲಿ 0-30 ಗುಂಟೆ
22. ಬೆಂಗಳೂರಿನ ಹಠಯೋಗಿ ಕಾಳಪ್ಪ ಸ್ವಾಮಿಗಳ ಮಠದ ಸೇವಾ ಟ್ರಸ್ಟ್ ಗೆ ಸರ್ವೇ ನಂ- 57 ರಲ್ಲಿ 0-32 ಗುಂಟೆ



