ದಾವಣಗೆರೆ: ಜಿಲ್ಲೆಯ ರೈತರ ಮುಖ್ಯ ಬೆಳೆಯಾದ ಅಡಿಕೆ ದರ (arecanut rate) ಸತತ ಕುಸಿತ ಬಳಿಕೆ ಎರಡ್ಮೂರು ದಿನದಿಂದ ಚೇತರಿಕೆ ಕಾಣುತ್ತಿದೆ. ದರ, ಡಿ. 9ರಿಂದ ತೀವ್ರ ಕುಸಿತ ಕಾಣುತ್ತಿದ್ದ ದರ ಇಂದು (ಡಿ.21) ಪ್ರತಿ ಕ್ವಿಂಟಲ್ ರಾಶಿ ಉತ್ತಮ ಅಡಿಕೆ ದರ 56,909 ರೂ. ಇದೆ.
ದಾವಣಗೆರೆಗೆ 100 ಹೊಸ ಎಲೆಕ್ಟ್ರಿಕಲ್ ಬಸ್
ಕಳೆದ ವಾರ ಏಕಾಏಕಿ 3 ಸಾವಿರ ಇಳಿಕೆ ಕಂಡು ರೈತರಲ್ಲಿ ಆತಂಕ ಮೂಡಿಸಿತ್ತು. ಆದರೆ, ಈಗ ದಿನದಿಂದ ದಿನಕ್ಕೆ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಕಳೆದ ಎರಡ್ಮೂರು ದಿನಕ್ಕೆ ಹೋಲಿಕೆ ಮಾಡಿದ್ರೆ 700 ರೂ.ಗಳಷ್ಟು ಚೇತರಿಕೆ ಕಂಡಿದೆ. ಇನ್ನೇನು ಸಂಕ್ರಾಂತಿ ಬಳಿಕ ಬೀಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರೈತರ ಸಹ ಬೇಸಿಗೆ ತಾಪ ಕಡಿಮೆ ಮಾಡಲು ಹಲವಾರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.
ಜ.21 ಚನ್ನಗಿರಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
- ಗರಿಷ್ಠ ಬೆಲೆ 56,909
- ಕನಿಷ್ಠ ಬೆಲೆ 51,779
- ಸರಾಸರಿ ಬೆಲೆ 55,195
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ ಜ.21ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 56,909,ರೂ. ಇದ್ದು, ಕನಿಷ್ಠ ಬೆಲೆ 51,779 ರೂ., ಸರಾಸರಿ ಬೆಲೆ 55,195 ರೂ.ಇದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಕೊಯ್ಲು ಸಂಪೂರ್ಣ ಮುಗಿದಿದ್ದು, ದರ ಕುಸಿತ ರೈತರಲ್ಲಿ ಆಂತಕ ಮೂಡಿಸಿದೆ.
ಮೂರು ವರ್ಷಗಳ ಗರಿಷ್ಠ ದರ ಪಟ್ಟಿ
- 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ
- 2024 ಮೇ ತಿಂಗಳಲ್ಲಿ ಗರಿಷ್ಠ ದರ 55 ಸಾವಿರ
- 2025 ಅಕ್ಟೋಬರ್ ನಲ್ಲಿ ಗರಿಷ್ಠ ದರ 68,349 ರೂ.
- 2026 ಜನವರಿ ಗರಿಷ್ಠ ದರ ರೂ.59,299.
2025ರ ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಮೇ ತಿಂಗಳಲ್ಲಿ 59,512 ರೂ.ಗೆ ಇಳಿದಿದ್ದು, ಜೂನ್ ಆರಂಭದಲ್ಲಿ 59,000 ರೂ. ಇದ್ದು ಕೊನೆಯಲ್ಲಿ 56,599 ರೂ. ಗೆ ಇಳಿಕೆಯಾಗಿತ್ತು. ಜುಲೈ ಮೊದಲ ವಾರ ಚೇತರಿಕೆ ಕಂಡು 58,099 ರೂ. ಆಗಿತ್ತು. ಆಗಸ್ಟ್ ಆರಂಭದಲ್ಲಿ ಸತತ ಏರಿಕೆ ಕಂಡು ಕ್ವಿಂಟಲ್ ಗೆ 60,500ರೂ. ತಲುಪಿತ್ತು. ಸೆಪ್ಟೆಂಬರ್ ನಲ್ಲಿ 62,889 ರೂ. ಇತ್ತು.
ಅಕ್ಟೋಬರ್ ತಿಂಗಳಲ್ಲಿ ಈ ವರ್ಷದಲ್ಲಿಯೇ ಗರಿಷ್ಠ ಬೆಲೆ 68, 349 ರೂ. ಇತ್ತು. ನವೆಂಬರ್ 60 ಸಾವಿರ ಗಡಿ ದಾಟಿತ್ತು. ಡಿಸೆಂಬರ್ 58,35 ರೂ. ಗೆ ಕುಸಿದಿತ್ತು. 2026 ವರ್ಷದ ಮೊದಲ ತಿಂಗಳು ಜನವರಿ 21 ರಙದು 56,909 ರೂ. ಇದೆ.



