ದಾವಣಗೆರೆ: ಹರಿಹರ ಶಾಸಕ ಬಿ.ಪಿ. ಹರೀಶ್ ಕಳೆದ 15 ದಿನದಿಂದ ಹುಚ್ಚರ ರೀತಿ ಆಡ್ತಿದ್ದಾರೆ. ಅವರು ಇದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮುಂದುವರೆಸಿದ್ರೆ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಿ, ಕಲ್ಲಲ್ಲಿ ಹೊಡಿತೀವಿ ಎಂದು ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಅಕ್ರಮವಾಗಿ ಮಣ್ಣು ತುಂಬಿದ್ದಾರೆ ಎಂದು ಹರಿಹರ ಶಾಸಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೆ, ಸಚಿವರು ಮಣ್ಣು ತುಂಬಿದ್ದಕ್ಕೆ ಸರ್ಕಾರ ನಿಗದಿಪಡಿಸಿದ ದರ ಕಟ್ಟಿದ್ದರೂ ಸಹ ಶಾಸಕ ಹರೀಶ್ ಅವರು ಸುಳ್ಳು ಆರೋಪ ಮಾಡಿ ಬಾಯಿಗೆ ಬಂದಂತೆ ಮಾಡನಾಡುತ್ತಿದ್ದಾರೆ. ಶಾಸಕರಿಗೆ ಹರಿಹರ ಕೇತ್ರದ ಅಭಿವೃದ್ಧಿಗಿಂತ ಸಚಿವರು, ಸಂಸದರ ಬಗ್ಗೆ ಕೆಟ್ಟದಾಗಿ ಬೈಯುವುದೇ ಕೆಲಸವಾಗಿದೆ ಎಂದು ಕಿಡಿಕಾರಿದರು.
ಕಾಡಜ್ಜಿ ಕೆರೆಯಲ್ಲಿ ಮಣ್ಣು ತುಂಬಿ ನೀರು ನಿಲ್ಲುವಂತೆ ಮಾಡಿ ಎಂದು ಗ್ರಾಮದ ರೈತರು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಸಹ ಕೆರೆ ಹೂಳು ಎತ್ತಲು ಅನುದಾನ ನೀಡುತ್ತಿಲ್ಲ. ಹೀಗಾಗಿ ಸಚಿವರು ತಮ್ಮ ತಂದೆ ಅವರು ತಿಥಿ ಕಾರ್ಯಕ್ಕೆ ಕಲ್ಲೇಶ್ವರ ರೈಸ್ ಮಿಲ್ ಹಿಂದೆ ನೆಲ ಸಮ ಮಾಡಲು ಕಾಡಜ್ಜಿ ಕೆರೆಯಿಂದ ಮಣ್ಣು ಎತ್ತಿದ್ದಾರೆ. ಇದನ್ನೇ ದೊಡ್ಡ ವಿಷಯ ಮಾಡಿ ಶಾಸಕ ಹರೀಶ್ ಹುಚ್ಚನ ರೀತಿ ವರ್ತನೆ ತೋರುತ್ತಿರುವುದು ಸರಿಯಲ್ಲ ಎಂದರು.
ದಾವಣಗೆರೆ; ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ,ಶೈಕ್ಷಣಿಕ ಶುಲ್ಕ ಮರುಪಾವತಿ ಅರ್ಜಿ ಆಹ್ವಾನ
ಶಾಂತ ರೀತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಆಗಬೇಕಾದ ಕೆಲಸ ಮಾಡಿಸಿಕೊಳ್ಳುವುದನ್ನು ಬಿಟ್ಟು,ಈ ರೀತಿ ಮಾತನಾಡಿದ್ರೆ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಹರೀಶ್ ಗೆ ಕಲ್ಲಲ್ಲಿ ಹೊಡೆಯುವ ವಾತಾವರಣ ಸೃಷ್ಟಿ ಆಗುತ್ತೆ. ಆ ರೀತಿ ಆಗಬಾರದು ಅಂದ್ರೆ ಶಾಸಕರು ಹರಿಹರ ಅಭಿವೃದ್ಧಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೊತೆ ಚರ್ಚಿಸಿ ಯೋಜನೆ ರೂಪಿಸಲಿ. ಅದನ್ನು ಬಿಟ್ಟು ದಾದಾಗಿರಿ ನಡೆಯಲ್ಲ ಎಂದು ತಿಳಿಸಿದರು.
ಹರಿಹರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹರಿಹರಕ್ಕೆ ಹೆಚ್ವಿನ ನೀರಾವರಿ ಯೋಜನೆಗಳು, ರಸ್ತೆ ಅಭಿವೃದ್ಧಿ ಆಗಬೇಕಿದೆ. ಹರಿಹರ ಕ್ಷೇತ್ರದಲ್ಲಿಯೇ ಅಕ್ರಮ ಮಣ್ಣು ಮಾಫಿಯಾ ನಢಯುತ್ತಿದ್ದರು ಸುಮ್ಮನಿರುವ ಶಾಸಕರು. ತಮ್ಮ ಕ್ಷೇತ್ರದ ಸಮಸ್ಯೆ ಆಲಿಸುವುದನ್ನು ಬಿಟ್ಟು ದಾವಣಗೆರೆ ಕ್ಷೇತ್ರದ ಕಾಡಜ್ಜಿ ಕೆರೆ ಮಣ್ಣು ಎತ್ತುವುದರ ಬಗ್ಗೆ ಮಾತನಾಡ್ತಾರೆ. ದಾವಣಗೆರೆ ಕೇತ್ರದ ಬಿಜೆಪಿ ಮುಖಂಡರೇ ಸುಮ್ಮನಿರುವಾಗ ನಿಮ್ಮ ಕೇತ್ರವಲ್ಲದಿದ್ದರೂ ಯಾಕೆ ಮೂಗು ತೋರಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.



