ದಾವಣಗೆರೆ: ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ಭವಿಷ್ಯಕ್ಕಾಗಿ ವಿವಿಧ ಪಿಂಚಣಿ, ಭವಿಷ್ಯ ನಿಧಿಗಳ ಸೌಲಭ್ಯ ಸಿಗುತ್ತದೆ. ಆದರೆ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಕೈಗೆ ಹಣ ಸಿಗಬೇಕಾದ್ರೆ, ಪ್ರತಿ ದಿನ ದುಡಿದು ತಿನ್ನಬೇಕು. ಇಂತಹ ಕಾರ್ಮಿಕರಿಗೆ ಸಂಧ್ಯಾ ಕಾಲ ಅವರಿಗೆ ಆಸೆಯಾಗಿ ನಿಲ್ಲಲು ಯಾವುದೇ ಧನ ಸಹಾಯ ಇರುವುದಿಲ್ಲ. ಈ ರೀತಿಯ ಕಾರ್ಮಿಕರನ್ನು ಗುರುತಿಸಿ ಅವರಿಗೂ ಸಹ 60 ವರ್ಷ ನಂತರ ಪಿಂಚಣಿ ಸೌಲಭ್ಯ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಯಾವುದು ಆ ಯೋಜನೆ..? ಇಲ್ಲಿದೆ ಸಂಪೂರ್ಣ ವಿವರ…
ಅಸಂಘಟಿತ ವಲಯಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್’ ಯೋಜನೆಯಡಿ (pm shram yogi mandhan yojana) ಅರ್ಹ ಶ್ರಮಿಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲು ಮುಂದಾಗಿದೆ.
ದಾವಣಗೆರೆ ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ `ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್’ ಯೋಜನೆಯಡಿ ಅರ್ಹ ಶ್ರಮಿಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು.
-ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ
ಶ್ರಮಿಕರ ಬದುಕಿಗೆ ಆಸರೆಯಾಗುವ ಈ ಯೋಜನೆಯನ್ನು ಮನೆ ಮನೆಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ದಾವಣಗೆರೆ: ಅಡಿಕೆ ದರ 10 ದಿನ ನಂತರ ಚೇತರಿಕೆ; ಇಷ್ಟಿದೆ ಇಂದಿನ ದರ
ಯಾವ ದಾಖಲೆ ಅಗತ್ಯ
ಅರ್ಹ ಫಲಾನುಭವಿಗಳಾಗಲು ಕೆಲೊಂದು ದಾಖಲೆಗಳು ಅಗತ್ಯವಾಗಿದೆ.
- ಆಧಾರ್ ಕಾರ್ಡ್,
- ಬ್ಯಾಂಕ್ ಪಾಸ್‌ಬುಕ್
- ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆ
ಎಲ್ಲಿ ನೋಂದಣಿ..?
- ಹತ್ತಿರದ ಕಾಮನ್ ಸರ್ವೀಸ್ ಸೆಂಟರ್
- ಎಲ್ಐಸಿ ಕಚೇರಿ
ಯಾರು ಅರ್ಹರು
- 18 ರಿಂದ 40 ವರ್ಷ ವಯಸ್ಸಿನವರು
- ಮಾಸಿಕ 15,000 ರೂ.ಗಿಂತ ಕಡಿಮೆ ಆದಾಯವಿರುವ ಅಸಂಘಟಿತ ಕಾರ್ಮಿಕರು
- ಬೀದಿ ಬದಿ ವ್ಯಾಪಾರಿಗಳು
- ಹಮಾಲಿಗಳು
- ಮನೆಗೆಲಸದವರು
- ಕೃಷಿ ಮತ್ತು ಕಟ್ಟಡ ಕಾರ್ಮಿಕರು
ಯಾರು ಅರ್ಹರಲ್ಲ
- ಆದಾಯ ತೆರಿಗೆ ಪಾವತಿದಾರರು
- ಇಎಸ್ಐ, ಪಿಎಫ್ ಸೌಲಭ್ಯ ಉಳ್ಳವರು
ಎಷ್ಟು ಹಣ ಪಾವತಿಸಬೇಕು..?
ಚಂದಾದಾರರು ಪ್ರತಿ ತಿಂಗಳು ಪಾವತಿಸುವಷ್ಟೇ ಸಮಾನ ಮೊತ್ತದ ಹಣವನ್ನು ಕೇಂದ್ರ ಸರ್ಕಾರವೇ ಫಲಾನುಭವಿಯ ಖಾತೆಗೆ ಭರಿಸಲಿದೆ. 60 ವರ್ಷ ಪೂರ್ಣಗೊಂಡ ನಂತರ ಶ್ರಮಿಕರಿಗೆ ಮಾಸಿಕ 3,000 ರೂ. ಖಚಿತ ಪಿಂಚಣಿ ದೊರೆಯಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ಅವಿನಾಶ್, ಡಿಹೆಚ್‍ಒ ಡಾ:ಷಣ್ಮುಖಪ್ಪ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.



