ಹರಿಹರ: 66/11 ಕೆ.ವಿ ಎಂ.ಯು.ಎಸ್.ಎಸ್. ವ್ಯಾಪ್ತಿಯಲ್ಲಿ ಕಂಬಗಳ ಸ್ಥಳಾಂತರ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಹರಿಹರ ಉಪವಿಭಾಗದ ಘಟಕ-1ರ ಶಾಖಾ ವ್ಯಾಪ್ತಿಯಲ್ಲಿ ಜ. 21ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲಿ ವ್ಯತ್ಯಯ..?
ಶಿವಮೊಗ್ಗ ರಸ್ತೆ, ಬೈಪಾಸ್, ತರಳಬಾಳು ಬಡಾವಣೆ, ವಿದ್ಯಾನಗರದ ಎ, ಬಿ, ಸಿ ಬ್ಲಾಕ್, ಇಂದಿರಾನಗರ, ಪ್ರಶಾಂತನಗರ, ಕಾಳಿದಾಸನಗರ,ಬೆಂಕಿನಗರ, ಜೆ.ಸಿ.ಬಡಾವಣೆ, ದೇವಸ್ಥಾನ ರಸ್ತೆ, ಮೂರ್ಕಲ್ ಕಾಂಪೌಂಡ್, ವೀರಭದ್ರೇಶ್ವರ ದೇವಸ್ಥಾನ ಏರಿಯಾ, ಬಾಹರ್ ಮಕಾನ್, ವಿ.ಆರ್.ಎಲ್. ರಸ್ತೆ, ರಾಮಮಂದಿರ,1ನೇ ರೈಲ್ವೆ ಗೇಟ್, ಜ್ಯೋತಿರ್ಮಠ ಏರಿಯಾ, ಎಫ್-1 ಅಂಜನೇಯ ಫೀಡರ್, ಎಫ್-2 ಬಾಲಾಜಿ, ಎಫ್-3 ಹರಿಹರೇಶ್ವರ, ಎಫ್-4 ವಿದ್ಯಾನಗರ, ಹಳ್ಳದಕೇರಿ, ಕೈಲಾಸನಗರ, ಗಂಗಾನಗರ, ತೆಗ್ಗಿನಕೇರಿ, ಅಂಜನೇಯ ಆಕ್ರೋಟೆಕ್, ದೋಸ್ತಾನ ರೈಸ್ ಮಿಲ್, ಜಾಮಿಯಾ ಮಸೀದಿ, ಹಳೆ ಬಂಬೂ ಬಾಜಾರ್, ಹಳೆ ತಹಶೀಲ್ದಾರ್ ರಸ್ತೆ ಶಿಬಾರ ಸರ್ಕಲ್, ನಡುವಲ ಪೇಟೆ ಹಾಗೂ ಸುತ್ತಲಿನ ಪ್ರದೇಶಗಳು.



