ಹರಿಹರ: ಸರ್ಕಾರಕ್ಕೆ ಯಾರು ಕೇಳದಿದ್ದರೂ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದು ವರ್ಷಕ್ಕೆ 60,000 ಕೋಟಿ ಅನುದಾನ ನೀಡಲಾಗುತ್ತಿದೆ. ಆದರೆ, ರೈತರ ಬೆಳೆ ಇಲ್ಲದೆ ಒಣಗುತ್ತಿರುವ ಬೆಳೆಗೆ ಕೆರೆಗಳಿಗೆ ನೀರು ಹರಿಸಿರಿ ಎಂದು ಅರ್ಜಿ ಹಾಕಿದರು ನೀರಿಲ್ಲ ಎಂದು ನಿಲುವನ್ನು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ಟೀಕಿಸಿದರು.
ದಾವಣಗೆರೆ: ಜಿಲ್ಲೆಯ ವಿವಿಧಡೆ ಕಳ್ಳತನ ಮಾಡುತ್ತಿದ್ದ ತಂದೆ, ಮಕ್ಕಳ ಬಂಧನ; ಬರೋಬ್ಬರಿ 10.90 ಲಕ್ಷ ಮೌಲ್ಯದ ಸ್ವತ್ತು ವಶ
ಕೆರೆಗಳಿಗೆ ನೀರು ಹರಿಸಿ
ಹರಿಹರದ ಹರಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳಿಗೆ ನೀಡುವಷ್ಟೇ ಆದ್ಯತೆಯನ್ನು ನೀರಾವರಿ ಸೌಲಭ್ಯಕ್ಕೂ ನೀಡಬೇಕು. ಚುನಾವಣೆಯಲ್ಲಿ ಯಾರು ಕೇಳದಿದ್ದರೂ ಪಂಚ ಗ್ಯಾರಂಟಿ ಘೋಷಣೆ ಮಾಡಲಾಯಿತು. ಇದಕ್ಕೆ ಸರ್ಕಾರ ₹60,000 ಕೋಟಿ ಅನುದಾನ ನೀಡಲಾಗುತ್ತಿದೆ. ಆದರೆ, ರೈತರ ಬದುಕಿಗೆ ಮೂಲ ಅವಶ್ಯಕತೆಯಾದ ಕೆರೆಗಳಿಗೆ ನೀರು ಹರಿಸಿ ಎಂದು ಅರ್ಜಿ ಹಾಕಿದರು ನೀರು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ರೈತರಿಗೆ ಹೆಣ್ಣು ಕೊಡುವಂತಾಗಬೇಕು
ತುಂಗಭದ್ರ ನದಿಯಿಂದ ಏತ ನೀರಾವರಿ ಮೂಲಕ ಜಿಲ್ಲೆಯ ವಿವಿಧ ತಾಲ್ಲೂಕುಗಳ 100ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ರೈತರಲ್ಲಿ ಸಂತಸ ಮೂಡಿದೆ. ಸರ್ಕಾರಿ ನೌಕರರಿಗಿಂತ ಹೆಚ್ಚಿನ ಸೌಲಭ್ಯಗಳು ರೈತರಿಗೆ ಸಿಗಬೇಕು. 5 ಎಕರೆ ಜಮೀನಿರುವ ಯುವ ರೈತ ಮದುವೆಯಾಗಲು ಹೆಣ್ಣು ಸುಲಭವಾಗಿ ಸಿಗುವಂತಾಗಬೇಕು ಎಂದರು.
ಬೆಳೆ ಪರಿಹಾರ ಪ್ರಕ್ರಿಯೆ ಸರಳೀಕರಿಸಿ
ಬೆಳೆ ನಷ್ಟವಾದ ಸಂದರ್ಭದಲ್ಲಿ 10 ಸಾವಿರ ಪರಿಹಾರ ಪಡೆಯಲು ರೈತರು ಅರ್ಜಿ ಹಾಕಲು 5 ಸಾವಿರ ಖರ್ಚು ಮಾಡಬೇಕಿದೆ. ಇದರಿಂದ ಬೇಸತ್ತುಬಹೋಗಿದ್ದು,ಬೆಳೆ ಪರಿಹಾರ ಪಡೆಯುವ ಪ್ರಕ್ರಿಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಳೀಕರಿಸಬೇಕು ಎಂದರು.



