ದಾವಣಗೆರೆ: ಶಾಲಾ, ಕಾಲೇಜುಗಳ ಬಳಿ ಶಾಪ್‌ಗಳಲ್ಲಿ ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ದಾವಣಗೆರೆ: ಟಿಸಿ ಬಳಿ ಬಿದ್ದಿದ್ದ ಕಸ ತೆಗೆಯುವಾಗ ವಿದ್ಯುತ್ ಸ್ಪರ್ಶ ; ವ್ಯಕ್ತಿ ಸಾವು
ಎಸ್ಪಿ ಉಮಾ ಪ್ರಶಾಂತ್ ಸೂಚನೆ ಮೇರೆಗೆ ಈ ದಾಳಿ ನಡೆದಿದೆ. ದಾವಣಗೆರೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ, ಕಾಲೇಜುಗಳ ಬಳಿ 100 ಯಾರ್ಡ್ಸ್ ಅಂತರದಲ್ಲಿರುವ ಅಂಗಡಿ/ಶಾಪ್‌ಗಳಲ್ಲಿ ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಅಭಿಯಾನ ನಡೆಸಿ ಪ್ರಕರಣಗಳನ್ನು ದಾಖಲಿಸಲು ನಿರ್ದೇಶನ ನೀಡಲಾಗಿದೆ.
ದಾವಣಗೆರೆ:ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಗೆ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ
ಎಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಆಯಾ ಠಾಣಾಧಿಕಾರಿಗಳ ಸಾರಥ್ಯದಲ್ಲಿ ವಿಶೇಷ ಅಭಿಯಾನವನ್ನು ನಡೆಸಿ, ಶಾಲಾ/ಕಾಲೇಜುಗಳ ಬಳಿ 100 ಯಾರ್ಡ್ಸ್ ಅಂತದಲ್ಲಿರುವ ಅಂಗಡಿ/ ಶಾಪ್‌ಗಳಲ್ಲಿ ಗುಟ್ಕಾ ಹಾಗೂ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿ/ಶಾಪ್‌ಗಳ ಮೇಲೆ 665 ಕಡೆ ದಾಳಿ ನಡೆಸಿದ್ದು, ಒಟ್ಟು 73,390/- ರೂಗಳ ದಂಡ ವಿಧಿಸಲಾಗಿರುತ್ತದೆ ಹಾಗೂ ಶಾಲಾ/ಕಾಲೇಜುಗಳ ಬಳಿ 100 ಯಾರ್ಡ್ಸ್ ಅಂತರದಲ್ಲಿ ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡದಂತೆ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಗಿರುತ್ತದೆ.
ದಾವಣಗೆರೆ: ಇನ್ಮುಂದೆ ಮನೆಯಿಂದಲೇ ಆನ್ ಲೈನ್ ಮೂಲಕ ಟ್ರಾಫಿಕ್ ಇ-ಚಲನ್ ಪಾವತಿಸಲು ಅವಕಾಶ
ಸಾರ್ವಜನಿಕರ ಗಮನಕ್ಕೆ: ಶಾಲಾ, ಕಾಲೇಜುಗಳ ಬಳಿ 100 ಯಾರ್ಡ್ಸ್ ಅಂತರದಲ್ಲಿರುವ ಅಂಗಡಿ/ಶಾಪ್‌ಗಳಲ್ಲಿ ಗುಟ್ಕಾ ಮತ್ತು ತಂಬಾಕು ಮಾರಾಟ ನಿಷಿದ್ಧವಿರುತ್ತದೆ. ಕಾನೂನು ಬಾಹಿರವಾಗಿ ಶಾಲಾ, ಕಾಲೇಜುಗಳ ಬಳಿ 100 ಯಾರ್ಡ್ಸ್ ಅಂತರದಲ್ಲಿರುವ ಅಂಗಡಿ/ಶಾಪ್‌ಗಳಲ್ಲಿ ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಿದ್ದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



