ಡಿವಿಜಿ ಸುದ್ದಿ, ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದಿಂದ ಒದ್ದು ಹೊರ ಹಾಕಿ ಎಂದು ಹೇಳಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಚಿವ ಬಿಜೆಪಿ ಮುಖಂಡ ಎಚ್ .ವಿಶ್ವನಾಥ್ ಕಿಡಿಕಾರಿದ್ದಾರೆ.
ಸಮಾಜದಲ್ಲಿ ಕೋಮುವಾದ ಹುಟ್ಟು ಹಾಕುವಂತಹ ಶಾಸಕ ಕೆ.ಆರ್.ರಮೇಶ್ಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕು ಒತ್ತಾಯಿಸಿದರು. ರಮೇಶ್ಕುಮಾರ್ ಮಾತ್ರವಲ್ಲದೆ, ಸಂವಿಧಾನ ಬಾಹಿರವಾಗಿ ಮಾತನಾಡುವ ಎಲ್ಲರ ಮೇಲೂ ಪಕ್ಷಾತೀತವಾಗಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಸ್ಪೀಕರ್ ಆಗಿದ್ದ ರಮೇಶ್ಕುಮಾರ್ ಪ್ರಧಾನಿಯನ್ನು ಒದ್ದು ಹೊರ ಹಾಕಿ ಎಂದು ಹೇಳುವುದು ಸರಿಯಲ್ಲ. ಅವರೊಬ್ಬ ಮಾನಸಿಕ ಅಸ್ವಸ್ಥ, ಯಶಸ್ವಿನಿ ಯೋಜನೆ ತೆಗೆದು ಹಾಕುವ ಮೂಲಕ ಗ್ರಾಮೀಣ ಜನರ ಆರೋಗ್ಯವನ್ನು ಕಿತ್ತುಕೊಂಡವರು. ಮೊದಲು ಇವರನ್ನು ಒದ್ದು ಜೈಲಿಗೆ ಹಾಕಬೇಕು ಎಂದರು.
ಶಾದಿಭಾಗ್ಯ ಅವಶ್ಯಕವಿದೆ. ಆದರೆ, ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಮುಸ್ಲಿಮರ ಪರವಾಗಿ ಬೂಟಾಟಿಕೆ ಮಾತುಗಳನ್ನಾಡುತ್ತಿದ್ದಾರೆ. ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷ ಅಥವಾ ಅಧ್ಯಕ್ಷ ಸ್ಥಾನಗಳಲ್ಲಿ ಒಂದಾದರೂ ಮುಸ್ಲಿಮರಿಗೆ ನೀಡುವಂತೆ ಸಿದ್ದರಾಮಯ್ಯ ಪ್ರತಿಪಾದಿಸಲಿ. ರೋಷನ್ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡುವ ಮೂಲಕ ಮುಸ್ಲಿಂ ನಾಯಕತ್ವವನ್ನೇ ಸಿದ್ದರಾಮಯ್ಯ ಕೊಂದು ಹಾಕಿದರು.ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳುವ ಎಚ್.ಡಿ.ದೇವೇಗೌಡ, ತಮ್ಮ ಪಕ್ಷದ ಅಧ್ಯಕ್ಷ ಸ್ಥಾನವನ್ನು ಮುಸ್ಲಿಮರಿಗೆ ನೀಡಲಿ ಎಂದು ಸವಾಲು ಹಾಕಿದರು.