ದಾವಣಗೆರೆ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಮೊರಾರ್ಜಿ ದೇಸಾಯಿ ವಸತಿ ಶಾಲೆಯ (residential school) ಮಾದರಿಯಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಈ ಯೋಜನೆಯಡಿಯಲ್ಲಿ ಜಿಲ್ಲೆಗೆ ಎರಡು ಶ್ರಮಿಕ ವಸತಿ ಶಾಲೆ ಮಂಜೂರಾಗಿವೆ.
ಪ್ರೋತ್ಸಾಹ ಧನ ಯೋಜನೆ: ಪ್ರಥಮ ದರ್ಜೆಯಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ 50 ಸಾವಿರದವರೆಗೆ ಪ್ರೋತ್ಸಾಹ ಧನ
ಎಲ್ಲೆಲ್ಲಿ ವಸತಿ ಶಾಲೆ..?
ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿವ ಸಲುವಾಗಿಯೇ ರಾಜ್ಯ ಸರ್ಕಾರ ಶ್ರಮಿಕ ವಸತಿ ಶಾಲೆ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಜಿಲ್ಲೆಗೆ ಎರಡು ಶಾಲೆಗಳು ಮಂಜೂರಾಗಿವೆ. ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರ್ಚಘಟ್ಟ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಗ್ಗನೂರು ಬಳಿ ವಸತಿ ಶಾಲೆಗೆ ಸ್ಥಳ ಕಾಯ್ದಿರಿಸಲಾಗಿದೆ.
ಭದ್ರಾ ಜಲಾಶಯ; ಜ.3ರಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ಹರಿಸಲು ತೀರ್ಮಾನ
ಕಂದಾಯ ಇಲಾಖೆಯಿಂದ ತಲಾ 6 ಎಕರೆ ಭೂಮಿ
ಮೊದಲ ಹಂತದಲ್ಲಿ ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಬಳಿ ಸ್ಥಳ ಗುರುತಿಸಲಾಗಿತ್ತು. 2ನೇ ಹಂತದಲ್ಲಿ ಶಾಲೆಗಳನ್ನು ಹಂಚಿಕೆ ಮಾಡಿದಾಗ ದಾವಣಗೆರೆ ತಾಲ್ಲೂಕಿನ ಕೊಗ್ಗನೂರು ಬಳಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದೆ. ನಿಗದಿಪಡಿಸಿದ ಎರಡು ಗ್ರಾಮದಲ್ಲಿ ತಲಾ 6 ಎಕರೆ ಭೂಮಿಯನ್ನು ಕಂದಾಯ ಇಲಾಖೆ ನೀಡಿದೆ.
ಮೊರಾರ್ಜಿ ವಸತಿ ಶಾಲೆಯ ಮಾದರಿಯಲ್ಲಿ ಶ್ರಮಿಕ ವಸತಿ ಶಾಲೆ
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಾದರಿಯಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇದಕ್ಕೆ ಸರ್ಕಾರ 1,530 ಕೋಟಿ ಅನುದಾನ ನೀಡಿದೆ.
ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಸೌಲಭ್ಯ
6ನೇ ತರಗತಿಯಿಂದ ಪಿಯುಸಿವರೆಗೆ ಶ್ರಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಲಭಿಸಲಿದೆ. ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಸೌಲಭ್ಯ ದೊರಕಲಿದೆ.ಪ್ರತಿ ತರಗತಿಗೆ 50 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗುತ್ತದೆ. ಪ್ರತಿ ವಸತಿ ಶಾಲೆಯಲ್ಲಿ ಅಂದಾಜು 300ರಿಂದ 350 ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಾಲಾ ಕಟ್ಟಡ, ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತದೆ. ತರಗತಿ ಕೊಠಡಿ, ಪ್ರಯೋಗಾಲಯ, ಕ್ರೀಡಾಂಗಣ, ಗ್ರಂಥಾಲಯ, ಕಚೇರಿ, ಶಿಕ್ಷಕರಿಗೆ ವಸತಿ ವ್ಯವಸ್ಥೆ ಇರಲಿದೆ.



