ದಾವಣಗೆರೆ: ಲಿಡ್ಕರ್ ನಿಗಮದಿಂದ ಎ.ವಿ.ಕೆ ಕಾಲೇಜು ರಸ್ತೆ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಳಿಗೆ ನಂ.11, ಜಗಳೂರು ಪ್ಲಾಟ್ ಪಾರಂ ದಾವಣಗೆರೆಯಲ್ಲಿ ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 1 ರಿಂದ 18 ರವರೆಗೆ ಅಪ್ಪಟ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ಮಹಿಳೆಯರ ಪಾದರಕ್ಷೆ ಮಾರಾಟವಿರುತ್ತದೆ ಎಂದು ವ್ಯವಸ್ಥಾಪಕರು ಹಾಗೂ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.
ಭದ್ರಾ ಕಾಡಾ ಸಭೆ
ಭದ್ರಾ ಅಚ್ಚುಕಟ್ಟು ಪ್ರದೇಶದ ಅಚ್ಚುಕಟ್ಟುದಾರರಿಗೆ ಬೇಸಿಗೆ ಹಂಗಾಮಿಗೆ ಭದ್ರಾ ಜಲಾಶಯದ ನೀರನ್ನು ಹಂಚಿಕೆ ಮಾಡಲು ಜನವರಿ 2 ರಂದು ಬೆಳಗ್ಗೆ 9 ಗಂಟೆಗೆ ಶಿವಮೊಗ್ಗ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ 88 ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ಏರ್ಪಡಿಸಲಾಗಿದೆ.



