ಹೈದರಾಬಾದ್: ಇಡೀ ಜತ್ತಿನಲ್ಲಿಯೇ ತಲ್ಲಣ ಸೃಷ್ಠಿಸಿದ ಕೊರೋನಾ ವೈರಸ್ ಭೀತಿ ಭಾರತೀಯರಿಗೂ ತಟ್ಟಿದ್ದು, ನೆರಯ ಆಂಧ್ರಪ್ರದೇಶದ ತಿಪತಿ ತಿಮ್ಮಪ್ಪನಿಗೂ ಕರೋನಾ ಭೀತಿ ಉಂಟಾಗಿದೆ.
ತಿರುಮಲ ತಿರುಪತಿ ದೇವಸ್ಥಾನ ಸಮಿತಿಯು ಜ್ವರ, ಕೆಮ್ಮು, ನೆಗಡಿ ಇದ್ದವರು ದೇವಾಲಯಕ್ಕೆ ಬರಬೇಡಿ ಭಕ್ತರಲ್ಲಿ ಮನವಿ ಮಾಡಿದೆ. ಭಕ್ತರ ವೈದ್ಯಕೀಯ ತಪಾಸಣೆ ನಡೆಸಿ ದೇವಾಲಯ ಒಳಕ್ಕೆ ಬಿಡಲಾಗುತ್ತಿದೆ. ತಪಾಸಣೆ ಸಂದರ್ಭದಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರ ಕಂಡುಬಂದಲ್ಲಿ ಭಕ್ತರ ದೇವಾಲಯ ಪ್ರವೇಶ ರದ್ದು ಮಾಡಲಾಗುತ್ತಿದೆ

ತಿರುಪತಿಗೆ ಬರುವ ಭಕ್ತರ ಮೇಲೆ ಆಡಳಿತ ಮಂಡಳಿ ತೀವ್ರ ನಿಗಾ ವಹಿಸಿದೆ. ತಿರುಪತಿಗೆ ದಿನಂಪ್ರತಿ ಸಾವಿರಾರು ಭಕ್ತರು ಭೇಟಿ ಕೊಡುತ್ತಿದದ್ದು, ದೇವಾಲಯ ಆಡಳಿತ ಮಂಡಳಿ ಮುಂಜಾಗ್ರತ ಕ್ರಮ ಕೈಗೊಂಡಿದೆ. ದೇವಾಲಯಕ್ಕೆ ಪ್ರವೇಶಿಸುವ ಪ್ರತಿಯೊಬ್ಬರು ಮಾಸ್ಕ್ ಹಾಕಿ ಬರಬೇಕು ಎಂದು ಸೂಚಿಸಿದೆ.



