ದಾವಣಗೆರೆ: ನವದೆಹಲಿಯಲ್ಲಿ ಈಚೆಗೆ ನಡೆದ ವಿಷನ್ ಫಾರ್ ಸುಜಲಾಂ ಭಾರತ್ ಶೃಂಗ ಸಭೆಯಲ್ಲಿ ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ ಗ್ರಾಮ ಪಂಚಾಯಿತಿ ಸುಜಲಾಂ ಭಾರತ್ ಗೌರವ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ದಾವಣಗೆರೆ: ತುಂತುರು ನೀರಾವರಿ- ಶೇ. 90ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನ
ಹಿರೇಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ಸಮುದಾಯ ಒಗ್ಗೂಡಿಸುವಿಕೆ, ನೀರಿನ ಸಂರಕ್ಷಣೆ ಮತ್ತು ಸುಸ್ಥಿರತೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗಳಿಗೆ ಸಂಬಂಧಿಸಿದಂತೆ ವಿನೂತನ ಅಂಶಗಳನ್ನು ಕಾರ್ಯಾನುಷ್ಠಾನ ಮಾಡುವ ಮೂಲಕ 24X7 ಕುಡಿಯುವ ನೀರಿನ ಪೂರೈಸಿದಕ್ಕೆ ಈ ಪ್ರಶಸ್ತಿ ಲಭಿಸಿದೆ.
ದಾವಣಗೆರೆ: ಆಟೋಗಳಲ್ಲಿ ಅಳವಡಿಸಿದ್ದ ಅನಧಿಕೃತ ವಿನ್ಯಾಸಗಳ ತೆರವು | ನಿಯಮ ಉಲ್ಲಂಘನೆ ವಿರುದ್ಧ ಕ್ರಮ
ಹಿರೇಮಳಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್. ರಶ್ಮಿ ಹಾಗೂ ತಂಡ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಸಂತೋಷ್, ಸದಸ್ಯರಾದ ವಿಜಯನಾಯ್ಕ, ಸುಕನ್ಯಾ, ಎಂ.ಎಸ್. ರಮೇಶ್ ಉಪಸ್ಥಿತರಿದ್ದರು.
ದಾವಣಗೆರೆ: ನಾಯಿಗಳ ದಾಳಿಗೆ 38 ವರ್ಷದ ಮಹಿಳೆ ಬಲಿ



