ನವದೆಹಲಿ: ಕರ್ನಾಟಕದಲ್ಲಿನ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು 4164.95 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಸಹಕಾರ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ದಾವಣಗೆರೆ | ಕುಸಿತ ಹಾದಿ ಹಿಡಿದ ಅಡಿಕೆ ದರ- ಡಿ.3ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಸಂಸತ್ತಿನ ಚಳಿಗಾಲದ ಅಧಿವೇಶನದ ರಾಜ್ಯಸಭಾ ಕಲಾಪದಲ್ಲಿ ಲಿಖಿತ ಉತ್ತರ ನೀಡಿದ ಅವರು, ನ.25ರ ವೇಳೆಗೆ ದೇಶಾದ್ಯಂತ ಇರುವ ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ 4,67,455.66 ಕೋಟಿ ರೂ.ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ 4,164.95 ಕೋಟಿ ರೂ. ನೀಡಲಾಗಿದೆ ಎಂದಿದ್ದಾರೆ.
ಮೊಬೈಲ್ ಗಳಲ್ಲಿ ಸಂಚಾರ ಸಾಥಿ ಆ್ಯಪ್ ಅಳವಡಿಕೆ ಕಡ್ಡಾಯ ಆದೇಶ ಹಿಂಪಡೆದ ಸರ್ಕಾರ
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಪ್ರಕಾರ ಕರ್ನಾಟಕದಲ್ಲಿ ಒಟ್ಟು 46,798 ಸಹಕಾರಿ ಸಂಘಗಳಿದ್ದು, ಇವುಗಳಲ್ಲಿ ಒಟ್ಟು 2.38 ಕೋಟಿ ಸದಸ್ಯರು ಇದ್ದಾರೆ.



